ಆಸ್ಟ್ರೇಲಿಯಾದಲ್ಲಿ ಭಾರಿ ಗಾತ್ರದ ಮೊಸಳೆಯೊಂದನ್ನು ರಕ್ಷಿಸಲಾಗಿದ್ದು, ಅದರ ತೂಕ ಬರೋಬ್ಬರಿ 350 ಕೆಜಿಯಾಗಿದೆ.
ಫ್ಲೋರಾ ರಿವರ್ ನೇಚರ್ ಪಾರ್ಕ್‌ನಲ್ಲಿ ವನ್ಯಜೀವಿ ರೇಂಜರ್ ಗಳು ಮೊಸಳೆ ಹಿಡಿದಿದ್ದರು. ಉಪ್ಪುನೀರಿನ ಈ ಗಂಡು ಮೊಸಳೆ ಉದ್ದ 4.4 ಮೀಟರ್ ಮತ್ತು ಸುಮಾರು 350 ಕಿಲೋಗ್ರಾಂಗಳಷ್ಟು ತೂಕವಿತ್ತು.
ಪ್ರವಾಸಿಗರು ಮತ್ತು ಸ್ಥಳೀಯ ವಾಕರ್ಸ್ ಆಗಾಗ್ಗೆ ಭೇಟಿ ನೀಡುವ ಸ್ಥಳದಲ್ಲಿ ದೊಡ್ಡ ಮೊಸಳೆ ಸಿಕ್ಕಿಬಿದ್ದಿತ್ತು ಎಂದು ಹಿರಿಯ ವನ್ಯಜೀವಿ ರೇಂಜರ್ ಜಾನ್ ಬರ್ಕ್ ಹೇಳಿಕೆ ನೀಡಿದ್ದರು.
ಆ ಮೊಸಳೆಯನ್ನು ಮೊಸಳೆ ಪಾರ್ಕ್ ಗೆ ಕರೆದೊಯ್ಯಲಾಯಿತು. ಬರ್ಕ್ ಪ್ರಕಾರ, ಇದನ್ನು ಬ್ರೀಡಿಂಗ್ ಸ್ಟಾಕ್ ಆಗಿ ಬಳಸಲಾಗುತ್ತದೆ.