ಕದಿಯಬೇಕು ಅಂತಾ ಬಂದ ಕಳ್ಳನೊಬ್ಬ ಆಕಸ್ಮಿಕವಾಗಿ ಮನೆಯ ಬೆಕ್ಕಿಗೆ ಎದುರಾದ ಫನ್ನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾರ್ಕ್ ಲಾಸನ್ ಎಂಬ ಹೆಸರಿನ ಈ ವ್ಯಕ್ತಿ ಮಾರ್ಚ್ 16ರಂದು ನ್ಯಾಟಿಂಗ್ಯಾಮ್ನಲ್ಲಿದ್ದ ಮನೆಯ ಕಾಂಪೌಂಡ್ ಒಳಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಮನೆ ಬಾಗಿಲನ್ನ ಮುರಿಯೋಕೆ ಪ್ಲಾನ್ ಮಾಡಿದ್ದ ಈತ ಮನೆಯ ಸುತ್ತ ತೆವಳಿಕೊಂಡೇ ಸಾಗಿದ್ದಾನೆ.
ಈ ರೀತಿ ತೆವಳಿಕೊಂಡು ಸಾಗ್ತಿದ್ದ ವೇಳೆ ಅಚಾನಕ್ಕಾಗಿ ಮನೆಯ ಮುಂದಿದ್ದ ಬೆಕ್ಕಿಗೆ ಮುಖಾಮುಖಿಯಾಗಿದ್ದಾನೆ. ಈ ವೇಳೆ ಆತ ಅಕಸ್ಮಾತ್ತಾಗಿ ಅಲಾರಂ ಬೆಲ್ ಪ್ರೆಸ್ ಮಾಡಿದ್ದು ಮನೆ ಮಾಲೀಕ ಅಲರ್ಟ್ ಆಗಿದ್ದಾರೆ,
ಸಿಸಿ ಟಿವಿ ಕ್ಯಾಮರಾದಲ್ಲಿ ಈ ಫನ್ನಿ ಸೀನ್ ರೆಕಾರ್ಡ್ ಆಗಿದ್ದು ಪೊಲೀಸ್ ಇಲಾಖೆ ತನ್ನ ಎಫ್ಬಿ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ.
https://www.facebook.com/nottspolice/videos/1012611832587988