ಜಗತ್ತಿನಾದ್ಯಂತ ಟ್ರೆಂಡ್ ಆಗಿದ್ದ ಐಸ್ ಬಕೆಟ್ ಚಾಲೆಂಜ್ ಸೃಷ್ಟಿಕರ್ತ ಪ್ಯಾಟ್ ಕಿನ್ ತಮ್ಮ 37ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅವರಿಗೆ ಏಳು ವರ್ಷಗಳ ಹಿಂದೆ ಲೌ ಗೆಹ್ರಿಗ್ (ಅಮೆಯೋಟ್ರೋಪಿಕ್ ಲ್ಯಾಟರಲ್ ಸ್ಲೆರಾಸಿಸ್) ಹೆಸರಿನ ಕಾಯಿಲೆಯೊಂದು ಅಂಟಿಕೊಂಡಿತ್ತು.
ಎಎಲ್‌ಎಸ್ ಐಸ್ ಬಕೆಟ್ ಚಾಲೆಂಜ್ ಹೆಸರಿನ ಸಾಮಾಜಿಕ ಮಾಧ್ಯಮ ಚಾನೆಲ್ ಸೃಷ್ಟಿಸಿ, ಐಸ್ ಬಕೆಟ್ ಚಾಲೆಂಜ್ ಮೂಲಕ 200 ಮಿಲಿಯನ್ ಡಾಲರ್ ಹಣ ಸಂಗ್ರಹ ಮಾಡಿದ್ದರು.
2014ರಲ್ಲಿ ವೃತ್ತಿಪರ ಗಾಲ್ಫರ್ ಕ್ರಿಸ್ ಕೆನ್ನೆಡಿ ತಮ್ಮ ಮಡದಿ ಜೇನೆಟ್ ಸೆನೆರ್ಷಿಯಾಗೆ ತಲೆ ಮೇಲೆ ಒಂದು ಬಕೆಟ್‌ನಷ್ಟು ಐಸ್ ಭರಿತ ನೀರನ್ನು ಸುರಿದುಕೊಂಡು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ತಿಳಿಸಿದ್ದರು.
ಇದರಿಂದ ಪ್ರೇರಿತರಾದ ಕಿನ್, ಪೆಟೆ ಫ್ರೇಟ್ಸ್ ಜೊತೆಗೆ ಸೇರಿಕೊಂಡು ಐಸ್ ಬಕೆಟ್ ಚಾಲೆಂಜ್ ಅನ್ನು ಸಾಮಾಜಿಕ ಜಾಲತಾಣದ ಮೂಲಕ ಇನ್ನಷ್ಟು ಜನಪ್ರಿಯಗೊಳಿಸಿದ್ದರು.
ತನಗೆ ಅಂಟಿದ ಎಎಲ್‌ಎಸ್ ಕಾಯಿಲೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಅಭಿಯಾನ ಮಾಡಲು ಮುಂದಾದ ಕಿನ್, ಐಸ್ ಬಕೆಟ್ ಚಾಲೆಂಜ್ ಮೂಲಕವೇ ಭಾರೀ ಜನಪ್ರಿಯತೆ ಗಳಿಸಿದ್ದರು.