ಕೊರೊನಾದಿಂದಾಗಿ ಜಗತ್ತಿನಾದ್ಯಂತ 2.14 ದಶಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ. ಸರಿಸುಮಾರು 100 ದಶಲಕ್ಷ ಜನರು ಇನ್ನೂ ಬಾಧೆಪಡುತ್ತಿದ್ದಾರೆ. ಬಹುತೇಕರ ಜೀವನಶೈಲಿಯನ್ನೇ ವೈರಾಣು ಬದಲಿಸಿದೆ. ಇಡೀ ಪ್ರಪಂಚವೇ ಕೊರೊನಾಕ್ಕೆ ಬೆಚ್ಚಿ ಬಿದ್ದಿದೆ.
ಇಷ್ಟೆಲ್ಲಾ ಆಗಿದ್ದರೂ ಇವರಿಗೆ ಇಂತಹದೊಂದು ಸಾಂಕ್ರಾಮಿಕ ರೋಗ ಇದೆ ಎಂಬುದರ ಅರಿವೇ ಇಲ್ಲವಂತೆ. ಅದರಲ್ಲೂ ಬ್ರಿಟನ್ ವೈರಸ್ ಕಾಟ ಹೆಚ್ಚಿರುವ ಯುಕೆ ಮಂದಿ, ಹಾಟ್ ಟಬ್ ಪಾರ್ಟಿ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಗ ಇಂತಹ ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಹೊಟ್ಟೆ ಬೊಜ್ಜು ಕರಗಿಸೋದು ಹೇಗೆ ಎಂಬ ಚಿಂತೆಯೇ….? ಈ 5 ಆಸನಗಳನ್ನ ಟ್ರೈ ಮಾಡಿ ನೋಡಿ
ಹ್ಯಾಂಪ್ ಶೈರ್ ಪ್ರದೇಶದ ಗೋಸ್ ಪೋರ್ಟ್ ಪೊಲೀಸರಿಗೆ ಹಾಟ್ ಟಬ್ ಪಾರ್ಟಿ ಬಗ್ಗೆ ಮಾಹಿತಿ ಸಿಗುತ್ತದೆ. ದಾಳಿ ನಡೆಸಿದಾಗ ಮನೆಯ ಹಿಂಬದಿಯಲ್ಲಿ ಅನೇಕರು ಹಾಟ್ ಟಬ್ ಪಾರ್ಟಿಯಲ್ಲಿ ಮುಳುಗಿರುತ್ತಾರೆ. ಪೊಲೀಸರು ಕೇಳಿದರೆ, ಕೋವಿಡ್ ನಿಯಮ ಜಾರಿಯಲ್ಲಿರುವುದು ತಮಗ್ಯಾರಿಗೂ ಗೊತ್ತಿಲ್ಲ ಎನ್ನುವ ಮೂಲಕ ತಪ್ಪಿಸಿಕೊಳ್ಳಲೆತ್ನಿಸಿದರು. ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.