ಲಾಸ್ ಏಂಜಲೀಸ್: ವರ್ಷವಾದರೂ ಕೊರೊನಾ ಕಾಟ ಕಳೆಯದ ಕಾರಣ ಅಮೆರಿಕಾದ ಜನ ಬೇಸತ್ತಿದ್ದಾರೆ. ಲಾಕ್ ಡೌನ್, ಮಾಸ್ಕ್, ಸಾಮಾಜಿಕ ಅಂತರದ ನಿಯಮಗಳನ್ನು ಬೇಕಂತಲೇ ಮುರಿಯಲಾರಂಭಿಸಿದ್ದಾರೆ. ಮಾಸ್ಕ್ ಧರಿಸುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಲಾಸ್ ಏಂಜಲೀಸ್ ಬೀದಿಗಳಲ್ಲಿ ಮಾಸ್ಕ್ ಹಾಕದ ಸಾಕಷ್ಟು ಜನ ಕಂಡುಬರುತ್ತಿದ್ದಾರೆ. ಜ.3 ರಂದು ನಗರದ ವೆಸ್ಟ್ ಪೀಲ್ಡ್ ಸೆಂಚುರಿ ಮಾಲ್ ನಲ್ಲಿ ದೊಡ್ಡ ಸಂಖ್ಯೆಯ ಜನ ಮಾಸ್ಕ್ ಧರಿಸದೇ ಶಾಪಿಂಗ್ ಮಾಡಿ ಪ್ರತಿಭಟನೆ ನಡೆಸಿದರು.
ಮಾಸ್ಕ್ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ವಿಡಿಯೋಗಳೆರಡು ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅಂಗಡಿಯ ಹುಡುಗರ ಜತೆ ಪ್ರತಿಭಟನಾಕಾರರು ವಾಗ್ವಾದಕ್ಕಿಳಿದು ಮಾಸ್ಕ್ ಧರಿಸದೇ ಶಾಪಿಂಗ್ ಮಾಡಲು ಅವಕಾಶ ನೀಡುವಂತೆ ಒತ್ತಾಯ ಮಾಡುತ್ತಿರುವುದು ವಿಡಿಯೋದಲ್ಲಿದೆ.