ದೇಶಿ ನಿರ್ಮಿತ ಕೋವಿಶೀಲ್ಡ್, ಕೋ ವ್ಯಾಕ್ಸಿನ್ಗೆ ವಿದೇಶಗಳಲ್ಲೂ ಡಿಮ್ಯಾಂಡ್…! 11-01-2021 6:48PM IST / No Comments / Posted In: Latest News, International ಕೊರೊನಾ ಮಹಾಮಾರಿಯಿಂದಾಗಿ ಇಡೀ ವಿಶ್ವವೇ ಲಸಿಕೆ ಮೇಲೆ ನಂಬಿಕೆ ಇಟ್ಟಿದೆ. ಭಾರತದಲ್ಲೂ ಕೊರೊನಾ ಲಸಿಕೆ ಹಂಚಿಕೆಗೆ ದಿನಗಣನೆ ಆರಂಭವಾಗಿದ್ದು ಸಕಲ ಸಿದ್ಧತೆ ನಡೆಯುತ್ತಿದೆ. ಈ ನಡುವೆ ದೇಶಿ ನಿರ್ಮಿತ ಕೊರೊನಾ ಲಸಿಕೆಗಾಗಿ ಬ್ರೆಜಿಲ್, ಮೊರಕ್ಕೋ, ಸೌದಿ ಅರೇಬಿಯಾ, ಮಯನ್ಮಾರ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಸೇರಿ 9 ರಾಷ್ಟ್ರಗಳು ಲಸಿಕೆಗೆ ಬೇಡಿಕೆ ಇಟ್ಟಿವೆ. ಕೊರೊನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಬಾಂಗ್ಲಾದೇಶ, ಭೂತಾನ್, ನೇಪಾಳ, ಶ್ರೀಲಂಕಾ ಹಾಗೂ ಅಪ್ಘಾನಿಸ್ತಾನದಂತಹ ನೆರೆಯ ರಾಷ್ಟ್ರಗಳ ಮೇಲೆ ಗಮನ ನೀಡಲಿದೆ. ಈ ವಿಚಾರವಾಗಿ ಮಾತನಾಡಿದ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀ ವಾತ್ಸವ್ ಭಾರತ ಮೊದಲಿನಿಂದಲೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದ್ರು. ವಿಶ್ವದ ಅನೇಕ ರಾಷ್ಟ್ರಗಳು ಭಾರತದ ಬಳಿ ಜಿ 2 ಜಿ ಮೂಲಕ ಇಲ್ಲವೇ ನೇರವಾಗಿ ಲಸಿಕೆ ನಿರ್ಮಾಣ ಸಂಸ್ಥೆಗೆ ನಮ್ಮ ದೇಶಕ್ಕೂ ಲಸಿಕೆ ನೀಡುವ ಬಗ್ಗೆ ಆದೇಶ ನೀಡಿ ಎಂದು ಮನವಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ನೇಪಾಳ ಭಾರತದ ಬಳಿ 12 ಮಿಲಿಯನ್ ಕೊರೊನಾ ಲಸಿಕೆಗಳಿಗೆ ಬೇಡಿಕೆ ಇಟ್ಟಿದೆ. ಭೂತಾನ್ ಸೀರಮ್ ಇನ್ಸ್ಟಿಟ್ಯೂಟ್ ನಿರ್ಮಿತ 1 ಮಿಲಿಯನ್ ಕೊರೊನಾ ಲಸಿಕೆಗೆ ಮನವಿ ಮಾಡಿದೆ. ಮಯನ್ಮಾರ್ ಕೂಡ ಸೀರಮ್ ಬಳಿ ಲಸಿಕೆ ವಿತರಣೆಯ ಒಪ್ಪಂದ ಮಾಡಿಕೊಂಡಿದೆ. ಇತ್ತ ಬಾಂಗ್ಲಾದೇಶ ಕೂಡ ಕೋವಿ ಶೀಲ್ಡ್ 30 ಮಿಲಿಯನ್ ಡೋಸ್ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.