ಭಾರತ ಸೇರಿದಂತೆ ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಅಭಿಯಾನ ಕೂಡ ವೇಗವಾಗಿ ನಡೆಯುತ್ತಿದೆ. ಈ ಮಧ್ಯೆ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆ ಸಂಶೋಧನೆಯೊಂದು ನಡೆದಿದೆ. ಇದ್ರಲ್ಲಿ ಇಂಗ್ಲೆಂಡ್ ನ ಫಿಜರ್ ಬೆಸ್ಟ್ ಎಂಬ ಉತ್ತರ ಸಿಕ್ಕಿದೆ.
ಕೊರೊನಾ ಸೋಂಕಿಗೆ ತುತ್ತಾದವರ ಮೇಲೆ ಫಿಜರ್ ಅದ್ಬುತ ಪರಿಣಾಮ ಬೀರಿದೆ. ಫಿಜರ್ ಲಸಿಕೆ ತೆಗೆದುಕೊಂಡವರ ದೇಹದಲ್ಲಿ 7 ಪಟ್ಟು ಪ್ರತಿಕಾಯ ಉತ್ಪತ್ತಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕೇವಲ ಒಂದು ಡೋಸ್ ಗೆ ಪ್ರತಿಕಾಯ ಮೂರು ಪಟ್ಟು ಹೆಚ್ಚಾಗಿದೆಯಂತೆ.
ಇಂಗ್ಲೆಂಡ್ನ ಆಕ್ಸ್ ಫರ್ಡ್, ಶೆಫೀಲ್ಡ್, ಲಿವರ್ಪೂಲ್, ನ್ಯೂಕ್ಯಾಸಲ್ ಮತ್ತು ಬರ್ಮಿಂಗ್ಹ್ಯಾಮ್ ಪ್ರದೇಶಗಳಲ್ಲಿ ಲಸಿಕೆ ತೆಗೆದುಕೊಂಡ ಜನರ ಮೇಲೆ ಅಧ್ಯಯನ ನಡೆದಿದೆ. ಇಂಗ್ಲೆಂಡ್ನ 237 ಆರೋಗ್ಯ ಕಾರ್ಯಕರ್ತರ ಮೇಲೆ ಸಂಶೋಧನೆ ನಡೆದಿದೆ. ಇದರಲ್ಲಿ ಹೆಚ್ಚಿನವರು ಮಹಿಳೆಯರು. ಈ ಸಂಶೋಧನೆಯಲ್ಲಿ ಪ್ರತಿಕಾಯಗಳು ಮತ್ತು ಟಿ-ಕೋಶಗಳನ್ನು ಅಳೆಯಲಾಗಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮೈಲ್ಸ್ ಕ್ಯಾರೊಲ್, ಜನರು ಲಸಿಕೆಯ ಎರಡೂ ಪ್ರಮಾಣವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ. ಲಸಿಕೆಯ ಒಂದು ಡೋಸ್ ಕೊರೊನಾ ನಿಯಂತ್ರಣಕ್ಕೆ ಸಾಕು ಎಂದು ಇದುವರೆಗೂ ಸಾಬೀತಾಗಿಲ್ಲ. ಲಸಿಕೆಯ ಎರಡನೇ ಪ್ರಮಾಣವು ರಕ್ಷಣೆಯ ಸಮಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಪ್ರತಿಕಾಯಗಳನ್ನು ಹೆಚ್ಚು ಸಮಯ ಕಾಪಾಡಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.