ಕೊರೊನಾ ನಿಯಂತ್ರಣಕ್ಕೆ ಬರುವ ಮೊದಲೇ ಮೈಮರೆತ ಕಾರಣ ಯುರೋಪ್ ದೇಶಗಳಲ್ಲಿ 2 ನೇ ಅಲೆ ಎದ್ದಿದೆ. ವಾತಾವರಣದಲ್ಲಿನ ಬದಲಾವಣೆ, ಜನರ ನಿರ್ಲಕ್ಷ್ಯದ ಕಾರಣ ಕೊರೋನಾ 2 ನೇ ಅಲೆಯಲ್ಲಿ ಸೋಂಕಿತರು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.
ಕೊರೊನಾ ಎರಡನೇ ಅಲೆಗೆ ತತ್ತರಿಸಿದ ಯುರೋಪ್ ರಾಷ್ಟ್ರಗಳಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡಲಾಗಿದೆ. ಫ್ರಾನ್ಸ್, ಸ್ಪೇನ್, ಜರ್ಮನಿ ದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಎರಡನೇ ಅಲೆಗೆ ಹೆದರಿದ ಜರ್ಮನಿ, ಸ್ಪೇನ್, ಯುಕೆ, ಮತ್ತು ಫ್ರಾನ್ಸ್ ನಲ್ಲಿ ಕಠಿಣ ನಿಯಮಗಳನ್ನು ಘೋಷಿಸಲಾಗಿದೆ.
ಫ್ರಾನ್ಸ್ ನಲ್ಲಿ ಮನೆಯಿಂದ ಹೊರಬರಲು ಕೂಡ ಅನುಮತಿ ಪಡೆಯಬೇಕಿದೆ. ಸ್ಪೇನ್ ನಲ್ಲಿ ರಾತ್ರಿ ಹೊತ್ತು ಮನೆಯಿಂದ ಆಚೆ ಬರದಂತೆ ತಿಳಿಸಲಾಗಿದೆ. ಜರ್ಮನಿಯಲ್ಲಿ ಥಿಯೇಟರ್ ಸೇರಿದಂತೆ ಹಲವು ಸ್ಥಳಗಳಿಗೆ ನಿರ್ಬಂಧ ಹೇರಲಾಗಿದೆ.
ಯುರೋಪ್ ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಜರ್ಮನಿ ಸ್ಪೇನ್ ಮತ್ತು ಫ್ರಾನ್ಸ್ ನಲ್ಲಿ ಕಠಿಣ ಲಾಕ್ಡೌನ್ ನಿಯಮಗಳನ್ನು ಜಾರಿಗೊಳಿಸಲಾಗಿದೆ.