ಇಂಗ್ಲೆಂಡ್ : ಕೋವಿಡ್ ಪರಿಣಾಮ ಯಾರಾದರೂ ಈಗ ಘಟ್ಟಿಯಾಗಿ ಸೀನಿದರೂ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿವರ್ತಿತ ವೈರಸ್ ಪರಿಣಾಮ ಯುನೈಟೆಡ್ ಕಿಂಗ್ಡಮ್ ಎರಡನೇ ಬಾರಿ ಲಾಕ್ ಡೌನ್ ಆಗಿದೆ. ವ್ಯಕ್ತಿಯೊಬ್ಬನ ವಿಲಕ್ಷಣ ಕಾರ್ಯದಿಂದ ಈಗ ಲಂಡನ್ ಜನ ಮತ್ತಷ್ಟು ಆತಂಕಿತರಾಗಿದ್ದಾರೆ.
ಕೋವಿಡ್ ಇರುವುದೇ ಸುಳ್ಳು ಎಂದು ವಾದಿಸುವ ವ್ಯಕ್ತಿಯೊಬ್ಬ ಡರ್ನಾಲ್ ನ ಎಟಿಎಂ ಯಂತ್ರದ ಬಟನ್ ಗಳನ್ನು ನಾಲಿಗೆಯಿಂದ ನೆಕ್ಕುವ ಮೂಲಕ ವಿಲಕ್ಷಣತೆ ಮೆರೆದಿದ್ದಾನೆ. ಅಲ್ಲದೆ, ಅದನ್ನು ಫೇಸ್ ಬುಕ್ ಲೈವ್ ಮೂಲಕ ಬಿತ್ತರಿಸಿದ್ದಾನೆ. “ಕೋವಿಡ್……..ಗೆ” ಸಮ ಎನ್ನುತ್ತ ಅವಾಚ್ಯ ಶಬ್ದ ಬಳಸಿದ್ದಾನೆ.
ಆತನ ಹೆಸರು ತಿಳಿದು ಬಂದಿಲ್ಲ. ಆದರೆ, ಘಟನೆ ನಡೆದಿರುವುದು ಸತ್ಯ. ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿ ಮಾಡಿದ್ದ ಎಂದು ದಕ್ಷಿಣ ಯಾಂಕ್ ಶೈರ್ ಪೊಲೀಸರು ತಿಳಿಸಿದ್ದಾರೆ.