
ಬಾವಲಿಗಳಿಂದ ಮಾನವನಿಗೆ ದಶಕಗಳ ಹಿಂದೆ ಹರಡುತ್ತಿದ್ದ ವೈರಸ್ ಈಗ ಕೊರೊನಾ ಆಗಿ ಮಾರ್ಪಟ್ಟಿದೆ ಎಂಬುದಾಗಿ ಅಂತಾರಾಷ್ಟ್ರೀಯ ಸಂಶೋಧಕರ ತಂಡ ಮಾಹಿತಿ ನೀಡಿದೆ. ಕೊರೊನಾಕ್ಕೆ ಮೂಲ ಕಾರಣವಾದ ಸಾರ್ಸ್- ಕೋವಿ 2 ವಂಶಾವಳಿಯ ಕುರಿತು ಅಧ್ಯಯನ ನಡೆಸಲಾಗಿದ್ದು, ನೇಚರ್ ಮೈಕ್ರೊಬಯಾಲಜಿ ಎಂಬ ಜರ್ನಲ್ ನಲ್ಲಿ ಸಂಶೋಧನೆಯ ಅಂಶಗಳನ್ನು ಪ್ರಕಟಿಸಲಾಗಿದೆ.
ಈ ವಂಶಾವಳಿಯಿಂದ ಮುಂದೆ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಸಲಾಗಿದೆ. ಕೊರೊನಾ ವೈರಸ್ ವಿವಿಧ ಪ್ರದೇಶಗಳ ವೈರಸ್ ಗಳನ್ನು ಸೇರಿಸಿಕೊಂಡು ಮರು ಸೃಷ್ಟಿಯಾಗಿದ್ದಾಗಿದೆ ಎಂದು ಅಮೆರಿಕಾದ ಪೆನ್ ಸ್ಟೇಟ್ ಯುನಿವರ್ಸಿಟಿಯ ಮೈಕೇಜ್ ಬೋನಿ ತಿಳಿಸಿದ್ದಾರೆ.
ಸ್ವರೂಪ ಬದಲಿಸಿದ ಸಾರ್ಸ್ ಕೊವಿ-2 ವೈರಸ್ ಅನ್ನು ಮತ್ತೆ ಸೃಷ್ಟಿಸುವುದು ಕಷ್ಟ. ತಜ್ಞರಿಂದ ನಾವು ಫೈಲೊಜನೆಟಿಕ್ ಡೇಟಿಂಗ್ ಸ್ಯಾಂಪಲಿಂಗ್ ಮಾಡಿದ್ದೇವೆ ಎಂದು ಬೋನಿ ತಿಳಿಸಿದ್ದಾರೆ. ತಂಡ ವೈರಸ್ ನ ಮುಂದಿನ ರೂಪಾಂತರ ತಿಳಿಯಲು ಮೂರು ವಿಧಾನಗಳಲ್ಲಿ ಅಧ್ಯಯನ ನಡೆಸಿದೆ. ಅಲ್ಲದೆ, ಬಾವಲಿಗಳಿಂದ ಹರಡುತ್ತಿದ್ದ ವೈರಸ್ ಹಾಗೂ ಕೋವಿಡ್ 19ನಡುವೆ ಸಂಬಂಧ ಇರುವುದನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.
ಬಾವಲಿಗಳಿಂದ ಹರಡುತ್ತಿದ್ದ ವೈರಸ್ ದಿಕ್ಚುತಿ ಹೊಂದಿ ಕೊರೊನಾ ವೈರಸ್ ಆಗಿ ರೂಪಾಂತರ ಹೊಂದಿದೆ ಎಂಬುದನ್ನು ಖಚಿತವಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ಸ್ ಕೋವಿ – 2, 2013 ರಲ್ಲಿ ಕಂಡು ಬಂದ RaTg-13 ಕೊರೊನಾ ವೈರಸ್ ಶೇ.93 ರಷ್ಟು ಹೊಂದಾಣಿಕೆಯಾಗುತ್ತದೆ ಎಂಬುದನ್ನು ತಜ್ಞರು ಕಂಡು ಹಿಡಿದಿದ್ದಾರೆ.