alex Certify ಕೊರೊನಾ ಲಸಿಕೆ ಖುಷಿ ಹೊತ್ತಲ್ಲೇ ವಿಶ್ವ ಸಂಸ್ಥೆಯಿಂದ ಎಚ್ಚರಿಕೆ: ದೃಢೀಕರಿಸದ ಲಸಿಕೆಯಿಂದ ದುಷ್ಪರಿಣಾಮ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಖುಷಿ ಹೊತ್ತಲ್ಲೇ ವಿಶ್ವ ಸಂಸ್ಥೆಯಿಂದ ಎಚ್ಚರಿಕೆ: ದೃಢೀಕರಿಸದ ಲಸಿಕೆಯಿಂದ ದುಷ್ಪರಿಣಾಮ ಸಾಧ್ಯತೆ

ಕೊರೊನಾ ಲಸಿಕೆ ತುರ್ತು ಅನುಮೋದನೆ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಸಾಬೀತಾಗದ ಲಸಿಕೆಗಳನ್ನು ಬಳಸುವುದರಿಂದ ಜನರಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಬಹುದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಅಮೆರಿಕದ ಔಷಧ ನಿಯಂತ್ರಕ ಮತ್ತು ಆಹಾರ ಆಡಳಿತ ವಿಭಾಗ ಕೊರೊನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಅಧಿಕಾರ ನೀಡಲಾಗಿದೆ ಎಂದು ಹೇಳಿದ ನಂತರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ಪ್ರಯೋಗ ಕುರಿತಾಗಿ ದೇಶಗಳಿಗೆ ಎಚ್ಚರಿಕೆ ನೀಡಿದೆ.

ದೃಢೀಕರಿಸದ ಕೊರೊನಾ ಲಸಿಕೆಯನ್ನು ಬಳಸುವುದರಿಂದ ಜನರಲ್ಲಿ ದುಷ್ಪರಿಣಾಮ ಉಂಟಾಗಬಹುದು. ಬಳಕೆಯ ಬಗ್ಗೆ ಅನುಮೋದನೆ ಅಧಿಕಾರವನ್ನು ನೀಡಲುವ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ವಿಶ್ವದಾದ್ಯಂತ ಅನೇಕ ವಿಜ್ಞಾನಿಗಳು, ಕಂಪನಿಗಳು, ಏಜೆನ್ಸಿಗಳು ಲಸಿಕೆ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಲಸಿಕೆ ಅನುಮೋದನೆ ಹಂತ-3 ಕ್ಲಿನಿಕಲ್ ಪ್ರಯೋಗಗಳ ದತ್ತಾಂಶವನ್ನು ಆಧರಿಸಿರಬೇಕು ಎಂದು ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...