alex Certify ವಿದೇಶಕ್ಕೆ ಹೋಗಿ ಲಸಿಕೆ ಪಡೆಯಲು ತಯಾರಿದ್ದೀರಾ…? ಹಾಗಿದ್ದರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶಕ್ಕೆ ಹೋಗಿ ಲಸಿಕೆ ಪಡೆಯಲು ತಯಾರಿದ್ದೀರಾ…? ಹಾಗಿದ್ದರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ

ಸಾಗರೋತ್ತರ ಲಸಿಕೆ ಪ್ರವಾಸಕ್ಕೆ ಭಾರತದಲ್ಲೂ ಬೇಡಿಕೆ ಹೆಚ್ಚಾಗಿದೆ. ಈ ರೀತಿ ಸಾಗರೋತ್ತರ ಲಸಿಕೆ ಪ್ರವಾಸಕ್ಕೆ ಇಚ್ಛಿಸುವವರಿಗೆ ಮಾಸ್ಕೋ ಪ್ರವಾಸಕ್ಕೆ ಸುವರ್ಣಾವಕಾಶ ಲಭ್ಯವಾಗಿದೆ.

ದೆಹಲಿ ಮೂಲದ ಟ್ರಾವೆಲ್​ ಏಜೆನ್ಸಿಯೊಂದು ದೇಶದ ಜನತೆಗೆ 24 ದಿನಗಳ ಪ್ರವಾಸದ ಪ್ಯಾಕೇಜ್​ ಒಂದನ್ನ ನೀಡಿದೆ. ಇದಕ್ಕಾಗಿ ನೀವು ಪಾವತಿಸಬೇಕಾದದ್ದು 1.3 ಲಕ್ಷ ರೂಪಾಯಿ..!

ರಷ್ಯಾದಲ್ಲೇ ಸ್ಪುಟ್ನಿಕ್​ ವಿ ಲಸಿಕೆ ಪಡೆಯಬೇಕು ಎನ್ನುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ.

24 ದಿನಗಳ ಪ್ರವಾಸದಲ್ಲಿ ಮೊದಲ ಡೋಸ್​ ನೀಡಿದ ಬಳಿಕ 21 ದಿನಗಳ ಅಂತರದಲ್ಲಿ ರಷ್ಯಾದ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನ ನೋಡಬಹುದಾಗಿದೆ. 21 ದಿನಗಳ ಬಳಿಕ ಪ್ರವಾಸಿಗರಿಗೆ ಸ್ಪುಟ್ನಿಕ್​ ವಿ 2ನೇ ಡೋಸ್​ ಹಾಕಲಾಗುತ್ತದೆ. ಮಾಸ್ಕೋಗೆ ತಲುಪಿದ ಮಾರನೇ ದಿನವೇ ಮೊದಲ ಡೋಸ್​ ಲಸಿಕೆ ನೀಡಲಾಗುತ್ತದೆ ಎಂದು ಟ್ರಾವೆಲ್​ ಏಜೆನ್ಸಿ ಹೇಳಿದೆ.

18 ವರ್ಷದೊಳಗಿನ ಅನಾಥ ಮಕ್ಕಳಿಗೆ 10 ಲಕ್ಷ ರೂ. ಪರಿಹಾರ ಘೋಷಣೆ

ಮೇ 15ರಂದು ಗುರುಗ್ರಾಮದಿಂದ ಮೊದಲ ಬ್ಯಾಚ್​ನ ಪ್ರವಾಸಿಗರು ರಷ್ಯಾಗೆ ತೆರಳಿದ್ದಾರೆ. ಇದರಲ್ಲಿ ವೈದ್ಯರ ಸಂಖ್ಯೆಯೇ ಹೆಚ್ಚಿದೆ ಎನ್ನಲಾಗಿದೆ. ಇವರೆಲ್ಲ ಈಗಾಗಲೇ ಮೊದಲ ಡೋಸ್​ ಸ್ಪುಟ್ನಿಕ್​ ವಿ ಲಸಿಕೆಯನ್ನ ಪಡೆದಿದ್ದಾರೆ. ಎರಡನೆ ಬ್ಯಾಚ್​​ನ ಪ್ರವಾಸಿಗರು ಮೇ 29ರಂದು ಪ್ರಯಾಣ ಬೆಳೆಸಲಿದ್ದಾರೆ. ಈಗಾಗಲೇ ಎಲ್ಲಾ ಸೀಟ್​ಗಳು ಬುಕ್​ ಆಗಿದ್ದು ಇದರಲ್ಲಿ ದೆಹಲಿ ಮೂಲದ ವೈದ್ಯರ ಸಂಖ್ಯೆಯೇ ಹೆಚ್ಚಿದೆ ಎಂದು ಟ್ರಾವೆಲ್​ ಏಜೆನ್ಸಿ ಅಧಿಕಾರಿಗಳು ಹೇಳಿದ್ದಾರೆ.

ಈ ತಂಡವು ಮೊದಲ ಮೂರು ದಿನಗಳನ್ನ ಸೇಂಟ್​ ಪೀಟರ್ಸ್​ಬರ್ಗ್​ನಲ್ಲಿ ಹಾಗೂ ಉಳಿದ ದಿನಗಳನ್ನ ಮಾಸ್ಕೋದಲ್ಲಿ ಕಳೆಯಲಿದೆ. ದೆಹಲಿಯಿಂದ ಹೊರಡುವ ಏರೋಫ್ಲಾಟ್​ ಟಿಕೆಟ್​ ದರ, ತಿಂಡಿ, ಊಟ ಹಾಗೂ ರಷ್ಯಾದ ಪ್ರೇಕ್ಷಣೀಯ ಸ್ಥಳಗಳನ್ನ ಈ ಪ್ಯಾಕೇಜ್​ ಒಳಗೊಂಡಿದೆ. 10 ಸಾವಿರ ವೀಸಾ ಮೊತ್ತವನ್ನ ಪ್ರವಾಸಿಗರು ಪ್ರತ್ಯೇಕವಾಗಿ ಭರಿಸಬೇಕು.

ಸಾಗರೋತ್ತರ ಲಸಿಕೆ ಪ್ರವಾಸಕ್ಕೆ ಭಾರತಕ್ಕೆ ಅನುಮತಿ ನೀಡಿದ ಕೆಲವೇ ರಾಷ್ಟ್ರಗಳಲ್ಲಿ ರಷ್ಯಾ ಕೂಡ ಒಂದಾಗಿದೆ. ಇಲ್ಲಿಗೆ ತೆರಳಲು ಆರ್​ಟಿಪಿಸಿಆರ್​ ನೆಗೆಟಿವ್​ ವರದಿ ಹೊಂದಿದ್ದರೆ ಸಾಕು. ಅಲ್ಲಿ ಹೋಗಿ ಕ್ವಾರಂಟೈನ್​ ಆಗುವ ಅಗತ್ಯವೂ ಇರೋದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...