ಯುಕೆ, ಯುಎಸ್ಎ, ಬಲ್ಗೇರಿಯಾ, ಪೋರ್ಚುಗಲ್ ನಂತ್ರ ಮೆಕ್ಸಿಕೋ ಸಿಟಿಯಲ್ಲೂ ಫಿಜರ್ ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರಿರುವುದು ವರದಿಯಾಗಿದೆ. ಮಹಿಳಾ ವೈದ್ಯೆಗೆ ಫಿಜರ್ ಲಸಿಕೆ ನೀಡಲಾಗಿತ್ತು. ಮೊದಲು ಆಕೆಗೆ ಚರ್ಮದ ಅಲರ್ಜಿ ಕಾಣಿಸಿಕೊಂಡಿದೆ. ನಂತರ ಅವಳು ಪಾರ್ಶ್ವವಾಯುವಿಗೆ ಒಳಗಾಗಿದ್ದಾಳೆ.
ಬ್ರಿಟನ್‌ನಲ್ಲೂ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಫಿಜರ್‌ನ ಲಸಿಕೆ ತೆಗೆದುಕೊಂಡ ನಂತರ ದೇಹದ ಮೇಲೆ ಇದೇ ರೀತಿಯ ಕೆಂಪು ಗುರುತು ಕಾಣಿಸಿಕೊಂಡಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಫಿಜರ್ ಲಸಿಕೆ ತೆಗೆದುಕೊಂಡ 48 ಗಂಟೆಗಳಲ್ಲಿ ಪೋರ್ಚುಗಲ್‌ನ ಆರೋಗ್ಯ ಕಾರ್ಯಕರ್ತರೊಬ್ಬರು ಇದ್ದಕ್ಕಿದ್ದಂತೆ ಸಾವನ್ನಪ್ಪಿದರು. ಮೆಕ್ಸಿಕೊದ ವೈದ್ಯೆಗೆ ಲಸಿಕೆ ತೆಗೆದುಕೊಂಡ ಅರ್ಧ ಗಂಟೆಯಲ್ಲಿ ಮೈ-ಕೈ ಮೇಲೆ ಕೆಂಪು ಗುರುತು ಕಾಣಿಸಿಕೊಂಡಿದೆ. ನಂತ್ರ ಮೈ-ಕೈ ನೋವು ಶುರುವಾಗಿದೆ.
ವೈದ್ಯೆಗೆ ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಐಸಿಯುವಿಗೆ ದಾಖಲಿಸಲಾಗಿದೆ. ವೈದ್ಯೆಗೆ ಮೊದಲಿನಿಂದಲೂ ಅಲರ್ಜಿ ಸಮಸ್ಯೆಯಿತ್ತು. ಹಾಗಾಗಿ ಲಸಿಕೆ ಅಡ್ಡ ಪರಿಣಾಮ ಬೀರಿದೆ ಎಂದು ವೈದ್ಯರು ಹೇಳಿದ್ದಾರೆ. ಲಸಿಕೆ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಈ ನಂತ್ರ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಪಾರ್ಶ್ವವಾಯುವಿಗೆ ಲಸಿಕೆ ಕಾರಣವಲ್ಲ ಎನ್ನಲಾಗ್ತಿದೆ. ತನಿಖೆ ನಂತ್ರ ಸತ್ಯ ಹೊರ ಬರಬೇಕಿದೆ.