alex Certify ಫೋಟೋದಲ್ಲಾದ ಸಣ್ಣ ಬದಲಾವಣೆಯಿಂದಾಗಿ ರಾತ್ರೋರಾತ್ರಿ ವೈರಲ್​ ಆದ ದಂಪತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋದಲ್ಲಾದ ಸಣ್ಣ ಬದಲಾವಣೆಯಿಂದಾಗಿ ರಾತ್ರೋರಾತ್ರಿ ವೈರಲ್​ ಆದ ದಂಪತಿ..!

ಲಂಡನ್​​ನ ಗ್ರೀನ್​ವಿಚ್​​ನ ದಂಪತಿ ತಮ್ಮ ಹೊಸ ಸೋಫಾ ಸೆಟ್​ನ್ನು ಪ್ರದರ್ಶನ ಮಾಡಬೇಕು ಅಂತಾ ಫೋಟೋಶೂಟ್​ ಮಾಡಿಕೊಳ್ಳಲು ನಿರ್ಧರಿಸಿದ್ರು. ಆದರೆ ಸಾಮಾಜಿಕ ಜಾಲತಾಣದಲ್ಲಿ ದಂಪತಿ ಹರಿಬಿಟ್ಟ ಈ ಫೋಟೋ ಕಂಡ ನೆಟ್ಟಿಗರು ತಲೆ ಕೆರೆದುಕೊಳ್ತಿದ್ದಾರೆ.

ಕೆಲ್ಲಿ ಗ್ನಾಕ್​ ಹಾಗೂ ಸ್ಯಾಮ್​ ಕ್ಯಾಸಿಡಿ ದಂಪತಿ ತಮ್ಮ ಮನೆಗೆ ಒಂದು ಸೋಫಾವನ್ನ ಖರೀದಿಸಿದ್ರು. ಈ ಸೋಫಾದ ಫೋಟೊವನ್ನ ತಮ್ಮ ಕುಟುಂಬಸ್ಥರಿಗೂ ತೋರಿಸಬೇಕು ಅಂತ ಅದರ ಮೇಲೆ ಕೂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಬಳಿಕ ಆಕೆ ಆ ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಹಾಗೂ ಈ ಫೋಸ್ಟ್ ವೈರಲ್​ ಆಗಿದೆ.

ಫೋಟೋದಲ್ಲಿ ದಂಪತಿ ಒಬ್ಬರನ್ನೊಬ್ಬರು ತಬ್ಬಿ ಕೊಂಡಿದ್ದಾರೆ. ಆದರೆ ನೀವು ಈ ಫೋಟೋವನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಅವರ ಮುಖ ಹಾಗೂ ದೇಹವನ್ನ ಅದಲು ಬದಲು ಮಾಡಿ ಫೋಟೋ ಎಡಿಟ್​ ಮಾಡಿರೋದು ಕಂಡು ಬರುತ್ತೆ.

ದಂಪತಿ ಸೆಪ್ಟೆಂಬರ್​ ತಿಂಗಳಲ್ಲೇ ಈ ಸೋಫಾವನ್ನ ಬುಕ್​ ಮಾಡಿದ್ರು. ಆದರೆ ಲಾಕ್​​ಡೌನ್​ನಿಂದಾಗಿ ಸೋಫಾ ಕೈ ಸೇರೋಕೆ 5 ತಿಂಗಳು ತಡವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...