alex Certify ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಈ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಈ ದಂಪತಿ

ಈಕ್ವೆಡಾರ್‌ನ ಹಿರಿಯ ಜೋಡಿಯೊಂದರ ಒಟ್ಟಾರೆ ವಯಸ್ಸು 214 ವರ್ಷಗಳು ಹಾಗೂ 358 ದಿನಗಳಷ್ಟಿದ್ದು, ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜೂಲಿಯೋ ಸೀಸರ್‌ ಮೋರಾ ಹಾಗೂ ವಾಲ್ಡ್ರಾಮಿನಾ ಕಿಂಟೆರೋಸ್ ಕಿಂಟೆರೋ ಎಂಬ ಈ ಪತಿ & ಪತ್ನಿಗೆ ಕ್ರಮವಾಗಿ 110 ಹಾಗೂ 104 ವರ್ಷ ವಯಸ್ಸಾಗಿದೆ. ಇವರಿಬ್ಬರು ಫೆಬ್ರವರಿ 7, 1941ರಲ್ಲಿ ವಿವಾಹವಾಗಿದ್ದಾರೆ. ಇವರಿಬ್ಬರು ಈಗ ಗಿನ್ನೆಸ್ ದಾಖಲೆಯ ಪುಟಗಳಲ್ಲಿ ತಮ್ಮ ಹೆಸರನ್ನು ಬರೆಯಿಸಿಕೊಂಡಿದ್ದಾರೆ.

ಸ್ನೇಹದಿಂದ ಆರಂಭಗೊಂಡು ಪ್ರೇಮವಾಗಿ ಅರಳಿದ ಇವರಿಬ್ಬರ ಸಂಬಂಧವು ವೈವಾಹಿಕ ಜೀವನದಲ್ಲಿ ಮಾಗುತ್ತಾ ಸಾಗಿದ್ದು, ಜಗತ್ತಿನ ಎಲ್ಲಾ ದಂಪತಿಗಳಿಗೂ ಸ್ಪೂರ್ತಿಯಾಗಿದೆ ಈ ಜೋಡಿ. ಇವರಿಗೆ 5 ಮಕ್ಕಳಿದ್ದು, 11 ಮೊಮ್ಮಕ್ಕಳು, 21 ಮರಿ ಮಕ್ಕಳು, 9 ಮರಿ ಮೊಮ್ಮಕ್ಕಳು ಇದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...