ಕೊರೋನಾ ವೈರಸ್ ಲಾಕ್ ಡೌನ್‌ನಿಂದ ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ಸಿಲುಕಿರುವ ಬ್ರಿಟನ್‌ನ ಜೋಡಿಯೊಂದು ಇಲ್ಲಿನ ದಟ್ಟಡವಿಗಳ ನಡುವೆ ಸಖತ್ ಎಂಜಾಯ್ ಮಾಡಿಕೊಂಡು ಕಾಲ ಕಳೆಯುತ್ತಿವೆ.
ಜೆಫ್ ಯಿಪ್ (37) ಹಾಗೂ ಆತನ ಪತ್ನಿ ಝುಝಾನಾ ಬರಾಂಕೋವಾ (36) ಆಗ್ನೇಯ ಏಷ್ಯಾ ನೋಡಬೇಕೆಂಬ ಆಸೆಯಲ್ಲಿ ಎರಡು ವರ್ಷಗಳಿಂದ ಇದ್ದರು. ಇದೀಗ ಅವರು ಇಲ್ಲಿನ ಸುಮಾತ್ರಾದಲ್ಲಿರುವ ಬುಕಿಟ್ ಲವಾಂಗ್ ಎಂಬ ಗ್ರಾಮಕ್ಕೆ ಒರಾಂಗುಟನ್‌ಗಳನ್ನು ನೋಡಲು ಮಾರ್ಚ್ ತಿಂಗಳಲ್ಲಿ ಬಂದವರು ಅಲ್ಲೇ ಉಳಿಯಬೇಕಾಗಿ ಬಂದಿದೆ.
ಅಲ್ಲಿಂದ ಬಾಲಿಗೆ ಹೋಗಿ, ತಮ್ಮ ಊರಾದ ಸ್ಟಾಫೋರ್ಡ್‌ಶೈರ್‌ಗೆ ಹೋಗುವ ಪ್ಲಾನ್ ನಲ್ಲಿ ಇದ್ದ ಇವರಿಗೆ ಕೋವಿಡ್-19 ಲಾಕ್ ಡೌನ್ ಅಡ್ಡಗಾಲಾಗಿದೆ. ಬ್ರಿಟನ್ ನಲ್ಲೂ ಲಾಕ್‌ಡೌನ್ ಇರುವ ಕಾರಣ ಅಲ್ಲಿಗೆ ಹೋಗಿ ಪರದಾಡುವ ಬದಲು ಈ ಊರಿನಲ್ಲೇ ಉಳಿದುಕೊಂಡು, ಅಲ್ಲಿನ ವನ್ಯಜೀವಿಗಳನ್ನು ನೋಡುತ್ತಾ ಮಜವಾಗಿ ಕಾಲ ಕಳೆಯುತ್ತಿದ್ದಾರೆ ಈ ದಂಪತಿ.