ಫ್ರೀ ವೈಫೈ ಸಿಗುತ್ತೆ ಅಂದರೆ ಅಬ್ಬಬ್ಬಾ ಅಂದ್ರೆ ನೀವು ಏನು ಮಾಡಬಹುದು? ಇಲ್ಲೊಂದು ದಂಪತಿ ಮಾತ್ರ 18 ವರ್ಷ ಫ್ರೀ ವೈಫೈ ಸಿಗುತ್ತೆ ಎಂಬ ಕಾರಣಕ್ಕೆ ಮಗುವಿಗೆ ಟ್ವೈಫಿಯಾ ಅಂತಾ ನಾಮಕರಣ ಮಾಡಿದ್ದಾರೆ .
ಮಗುವಿನ ತಂದೆ ಫೇಸ್ಬುಕ್ನಲ್ಲಿ ಸ್ವಿಸ್ನ ಟ್ವೈಫೈ ಎಂಬ ಕಂಪನಿ ಹಾಕಿದ ಜಾಹಿರಾತೊಂದನ್ನ ನೋಡಿದ್ದಾರೆ. ಇದರಲ್ಲಿ ನಿಮ್ಮಹೆಣ್ಣು ಮಗುವಿಗೆ ಟ್ವೈಫಿಯಾ ಹಾಗೂ ಗಂಡು ಮಗು ಇದ್ರೆ ಟ್ವೈಫೂಸ್ ಅಂತಾ ನಾಮಕರಣ ಮಾಡಿದ್ರೆ 18 ವರ್ಷ ಫ್ರೀ ವೈಫೈ ಕೊಡೋದಾಗಿ ಹೇಳಿದ್ದಾರೆ.
ಇದನ್ನ ನೋಡಿದ ಪೋಷಕರು ತಮ್ಮ ನವಜಾತ ಶಿಶುಗೆ ಟ್ವೈಫಿಯಾ ಅಂತಾ ನಾಮಕರಣ ಮಾಡಿದ್ದಾರೆ . ಹೇಗಿದ್ರೂ ನಮಗೆ ಫ್ರೀ ವೈಫೈ ಸಿಗಲಿದೆ. ವೈಫೈಗೆ ನಾವು ಕೊಡಬೇಕಿದ್ದ ಹಣವನ್ನ ಮಗಳಿಗಾಗಿ ಕೂಡಿಡುತ್ತೇವೆ. ಮುಂದೆ ಅವಳು ಆ ಹಣದಿಂದ ಕಾರನ್ನ ಖರೀದಿಸುವಂತಾಗಲಿ ಅಂತಾ ಹೇಳಿದ್ರು.