ಡಚ್ನ ವೃದ್ಧ ದಂಪತಿ ಯುರೋಪ್ನ ಕೇವಲ ಐದೇ ದಿನಗಳಲ್ಲಿ ನಿರ್ಮಾಣ ಮಾಡಲಾದ ಮೊದಲ 3ಡಿ ಪ್ರಿಂಟ್ ಮನೆಗೆ ಶಿಫ್ಟ್ ಆಗಿದ್ದಾರೆ.
70 ವರ್ಷದ ಎಲೈಜ್ ಲಟ್ಜ್ ಹಾಗೂ 67 ವರ್ಷದ ಹ್ಯಾರಿ ಡೆಕ್ಕರ್ ಎರಡು ಬೆಡ್ರೂಮ್ ಹೊಂದಿರುವ ಮನೆಯನ್ನ 960 ಡಾಲರ್ಗೆ ಬಾಡಿಗೆಗೆ ಪಡೆದಿದ್ದಾರೆ. ಕೇವಲ 94 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ಮನೆಯನ್ನ ನಿರ್ಮಿಸಲಾಗಿದೆ.
ಮನೆಯ ಹೊರಾಂಗಣದಲ್ಲಿ ತಿಳಿ ಬಿಳಿ ಬಣ್ಣದ ಪೇಂಟಿಂಗ್ ಮಾಡಲಾಗಿದೆ. ಮನೆಯ ಒಳಗಡೆ ಅತ್ಯಂತ ಸುಂದರವಾಗಿ ಅಲಂಕಾರ ಮಾಡಲಾಗಿದೆ.
ಈ ದಂಪತಿ ಕಳೆದ ವಾರ ಮನೆಯ ಡಿಜಿಟಲ್ ಕೀಯನ್ನ ಪಡೆದಿದೆ. ಈ ಮನೆ ನಿಮಗೆ ನೋಡೋಕೆ ಸಣ್ಣ ಗಾತ್ರ ಎನಿಸಿದರೂ ಸಹ ಚಿಕ್ಕ ಕುಟುಂಬಕ್ಕೆ ಇದು ಹೇಳಿ ಮಾಡಿಸಿದಂತಹ ಮನೆಯಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಎಲೈಜ್, ಈ ರೀತಿಯ ಮನೆಯನ್ನ ನಾನು ಇದೇ ಮೊದಲ ಬಾರಿಗೆ ನೋಡಿದ್ದೇನೆ. ತಾವು ಚಿಕ್ಕವರಾಗಿದ್ದಾಗ ತಿಳಿದುಕೊಂಡಿದ್ದ ಯಾವುದೋ ಒಂದು ವಿಚಾರವನ್ನ ಇದು ನೆನಪಿಸುತ್ತೆ ಎಂದು ಹೇಳಿದ್ದಾರೆ.
ತಜ್ಞರು ನೀಡಿದ ಮಾಹಿತಿಯ ಪ್ರಕಾರ ಈ ಮನೆಗೆ ಬಳಸಲಾದ ಸಿಮೆಂಟ್ ಟೂತ್ಪೇಸ್ಟ್ನ ಸ್ಥಿರತೆಯನ್ನ ಹೊಂದಿದೆ. ಹಾಗೂ ಇದು ಮನೆಯನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿದೆ ಎಂದು ಹೇಳಿದ್ದಾರೆ.