![Couple handcuffed together for 123 days to save their relationship but they break up see images | Couple ने 123 दिन तक हथकड़ी से बांधे रखा एक-दूसरे का हाथ, बनाया वर्ल्ड रिकॉर्ड |](https://hindi.cdn.zeenews.com/hindi/sites/default/files/2021/06/18/850364-couple-chained-themselves-together-to-test-their-love.jpg)
ಉಕ್ರೇನ್‌ನ ರಾಜಧಾನಿ ಕೀವ್ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 123 ದಿನಗಳ ಕಾಲ ಪರಸಪರ ಕೈಗೆ ಕೋಳ ಹಾಕಿಕೊಂಡು ಒಟ್ಟಿಗೆ ಕಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಈಗ ಚರ್ಚೆಯಾಗ್ತಿದ್ದಾರೆ. 123 ದಿನಗಳ ಕಾಲ ಒಟ್ಟಿಗಿದ್ದ ಈ ಜೋಡಿ ವಿಶ್ವ ದಾಖಲೆ ಬರೆದಿದ್ದಾರೆ.
33 ವರ್ಷದ ಅಲೆಕ್ಸಾಂಡರ್ ಮತ್ತು 29 ವರ್ಷದ ವಿಕ್ಟೋರಿಯಾ 123 ದಿನಗಳ ಹಿಂದೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಯೂನಿಟಿ ಸ್ಮಾರಕದ ಎದುರು ಪರಸ್ಪರ ಕೈಗೆ ಕೋಳ ಹಾಕಿಕೊಂಡರು. ಇಬ್ಬರೂ ಅಲ್ಲೇ ಕೈಕೋಳ ಕಳಚಿದ್ದಾರೆ. ಕೈಕೋಳ ತೆಗೆಯುತ್ತಿದ್ದಂತೆ ಇಬ್ಬರೂ ಖುಷಿಯಿಂದ ಕುಣಿದಾಡಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಯಾವುದೇ ನಿರ್ಬಂಧವಿಲ್ಲದೆ ಬದುಕಲು ನಾನು ಇಚ್ಛಿಸಿದ್ದೇನೆ. ಹಾಗಾಗಿ ಬ್ರೇಕ್ ಅಪ್ ಮಾಡಿಕೊಳ್ತಿದ್ದೇನೆಂದು ವಿಕ್ಟೋರಿಯಾ ಹೇಳಿದ್ದಾಳೆ.
ಅಲೆಕ್ಸಾಂಡರ್, ವಿಕ್ಟೋರಿಯಾ ಜೊತೆ ಜೀವನ ನಡೆಸಲು ಬಯಸಿದ್ದ. ಇದೇ ಕಾರಣಕ್ಕೆ ಆಕೆ ಜೊತೆ 123 ದಿನ ಒಟ್ಟಿಗಿದ್ದ. ಆದ್ರೆ ವಿಕ್ಟೋರಿಯಾ ಮನಸ್ಸು ಮಾಡಲಿಲ್ಲ. ಹಳೆ ನೆನಪಿನೊಂದಿಗೆ ಜೀವನ ನಡೆಸುತ್ತೇನೆಂದು ಅಲೆಕ್ಸಾಂಡರ್ ಹೇಳಿದ್ದಾನೆ. ಒಟ್ಟಿಗಿರುವ ಸಂದರ್ಭದಲ್ಲಿ ವೈಯಕ್ತಿಕ ಗೌಪ್ಯತೆಗೆ ಅಡ್ಡಿಯಾಗಿತ್ತಂತೆ. ಮದುವೆಯಾಗುವ ಪ್ಲಾನ್ ನಲ್ಲಿದ್ದವರು ಈಗ ಬೇರೆಯಾಗಿದ್ದಾರೆ.