ಬರೋಬ್ಬರಿ ಮೂರು ವರ್ಷಗಳ ಹುಡುಕಾಟದ ಬಳಿಕ ನ್ಯೂಯಾರ್ಕ್ನ ದಂಪತಿ ತಮ್ಮ ಮನೆಯ ಮುಂಭಾಗದಲ್ಲಿ ಬಳಸಿದ ಕಾಫಿ ಕಪ್ಗಳನ್ನ ಎಸೆಯುವವನನ್ನ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಿಡಿಗೇಡಿಯನ್ನ ಕಂಡು ಹಿಡಿಯುವ ಸಲುವಾಗಿ ಎಡ್ವರ್ಡ್ ಹಾಗೂ ಚೆರಿಲ್ ಪ್ಯಾಟನ್ ತಮ್ಮ ಮನೆಯ ಮುಂಭಾಗದಲ್ಲಿದ್ದ ಮರಕ್ಕೆ ಕ್ಯಾಮರಾವನ್ನ ಅಳವಡಿಸಿದ್ದರು. ಇದಾದ ಬಳಿಕ ನೆರೆಹೊರೆಯವರ ಸಹಾಯದಿಂದ ಮಿನಿವ್ಯಾನ್ನಲ್ಲಿ ಬಂದು ಕಾಫಿ ಕಪ್ ಎಸೆಯುತ್ತಿದ್ದವನನ್ನ ಪತ್ತೆ ಮಾಡಿದ್ದಾರೆ
ಎಡ್ವರ್ಡ್ ಪೊಲೀಸರನ್ನ ಕರೆಸಿದ್ದು 76 ವರ್ಷದ ಲ್ಯಾರಿ ಪಾಪ್ರನ್ನ ಅವರಿಗೆ ಒಪ್ಪಿಸಿದ್ದಾರೆ. ಈ ವೇಳೆ ಈತ ತಾನು ಈ ಹಿಂದೆ ಚೆರಿಲ್ ಜೊತೆ ಕೆಲಸ ಮಾಡಿದ್ದು ಆಕೆಯ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾಗಿ ಹೇಳಿದ್ದಾನೆ.
ಆರೋಪಿ ವಿರುದ್ಧ ಕಿರುಕುಳ ಹಾಗೂ ಕಸವನ್ನ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ನನಗೆ ಚೆನ್ನಾಗಿ ಪರಿಚಯ ಇರುವ ವ್ಯಕ್ತಿಯೇ ಅದರಲ್ಲೂ ವಿಶೇಷವಾಗಿ ಈ ಇಳಿವಯಸ್ಸಿನಲ್ಲಿ ಇಂತಹ ಕೆಲಸವನ್ನ ಮಾಡ್ತಾರೆ ಎಂದು ನಾನು ಊಹಿಸಿಯೂ ಇರಲಿಲ್ಲ ಎಂದು ಪ್ಯಾಟೋನ್ ಹೇಳಿದ್ದಾರೆ.