![](https://kannadadunia.com/wp-content/uploads/2021/05/SSC_4.jpg)
ಇಂಗ್ಲೆಂಡ್‌ನ ಚೆಶೈರ್‌ನ ದಂಪತಿಗಳಿಬ್ಬರು ಸಕಲ ಸೌಲಭ್ಯವಿರುವ ಪರಿಸರ-ಸ್ನೇಹಿ ಮನೆಯೊಂದನ್ನು ಕೇವಲ ಆರೇ ವಾರಗಳಲ್ಲಿ ಕಟ್ಟಿದ್ದಾರೆ. ಈ ಮನೆಯಲ್ಲಿ ಜಿಮ್ನಾಶಿಯಮ್, ಕಚೇರಿ ಸೇರಿದಂತೆ ಸುವ್ಯವಸ್ಥಿತ ಇಂಟೀರಿಯರ್ ಇದೆ.
ತಾವಿರುವ ಡೆಲಾಮಾರೆ ಪ್ರದೇಶದಲ್ಲಿ ಪರಿಸರ ಸ್ನೇಹಿಯಾದ ಹಾಗೂ ಇಂಧನ ಮಿತಬಳಕೆಗೆ ನೆರವಾಗುವ ರೀತಿಯ ಮನೆ ನಿರ್ಮಿಸಲು ಸ್ಯೂ ರಾಬಿನ್ಸನ್ ಹಾಗೂ ಆಕೆಯ ಸಂಗಾತಿ ನಿರ್ಧರಿಸಿ, ನಾಲ್ಕು ಬೆಡ್‌ರೂಂನ ಈ ಮನೆಗೆ ಸ್ಕೆಚ್ ಬರೆಯಲು ಮುಂದಾಗಿದ್ದಾರೆ.
ಒಂದೇ ದಿನದಲ್ಲಿ 1,86,364 ಜನರಲ್ಲಿ ಕೊರೊನಾ ಪಾಸಿಟಿವ್; 3,660 ಜನರು ಮಹಾಮಾರಿಗೆ ಬಲಿ; ದೇಶದಲ್ಲಿರುವ ಸಕ್ರಿಯ ಪ್ರಕರಣಗಳೆಷ್ಟು ಗೊತ್ತಾ…..?
ಮುಂದಿನ ಆರೇ ವಾರಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿದ್ದ ಖಾಲಿ ಜಮೀನೊಂದರಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಿದ ಇಬ್ಬರು, ಆಫ್-ಸೈಟ್ ಇಂಜಿನಿಯರ್‌ಗಳ ಸಹಾಯದೊಂದಿಗೆ ಅಗತ್ಯ ನಿರ್ಮಾಣ ಸಾಮಗ್ರಿಗಳನ್ನು ಅಲ್ಲಿಗೆ ತರಿಸಿಕೊಂಡು, ಎಲ್ಲವನ್ನೂ ಜೋಡಿಸಲು ಸಫಲರಾಗಿದ್ದಾರೆ.
ತಮಗೆ ಬೇಕಾದ ಹಾಗೆ ಟಿಂಬರ್ ನೀಲನಕ್ಷೆಯೊಂದನ್ನು ತಯಾರಿಸಿದ ಇಬ್ಬರೂ, ಕಾರ್ಖಾನೆಯೊಂದಕ್ಕೆ ಅದನ್ನು ಕಳುಹಿಸಿ ಮರದ ಕೆಲಸ ಮಾಡಿಸಿಕೊಂಡಿದ್ದಾರೆ.
ಒತ್ತಡ ನಿವಾರಿಸಿಕೊಳ್ಳಲು ನೃತ್ಯದ ಮೊರೆ ಹೋದ ಅಸ್ಸಾಂ ವೈದ್ಯ
ಮನೆಯ ಮುಖ್ಯ ಭಾಗವು ನಾಲ್ಕೇ ದಿನಗಳಲ್ಲಿ ಎದ್ದು ನಿಂತ ಕಾರಣ ಮುಂದಿನ ಆರು ವಾರಗಳಲ್ಲಿ ಒಳಾಂಗಣ ವಿನ್ಯಾಸವೂ ಪೂರ್ಣವಾಗಿ ಮುಗಿದಿದೆ.
ಮನೆಯಲ್ಲಿ ಎಲೆಕ್ಟ್ರಿಕ್ ಹೀಟಿಂಗ್, ಕಾಂಕ್ರೀಟ್ ಫ್ಲೋರಿಂಗ್, ಮೆಟ್ಟಿಲುಗಳು, ಜಿಮ್, ಕಚೇರಿ ಹಾಗೂ ಕೈತೋಟಗಳು ಇದ್ದು, ಇವೆಲ್ಲವನ್ನೂ 45 ದಿನಗಳಲ್ಲಿ ಮಾಡಿ ಮುಗಿಸಲಾಗಿದೆ.
ಈ ಮನೆಯನ್ನು 825,000 ಪೌಂಡ್‌ಗಳಿಗೆ ಮಾರಾಟ ಮಾಡಿ, ಬಂದ ದುಡ್ಡಿನಲ್ಲಿ ವಿದೇಶಕ್ಕೆ ಹೋಗಿ ನೆಲೆಸಲು ದಂಪತಿ ನಿರ್ಧರಿಸಿದ್ದಾರೆ.