1300 ರೂಪಾಯಿ ಮೌಲ್ಯದ ವೈನ್ ಬಾಟಲಿಗಳನ್ನ ಆರ್ಡರ್ ಮಾಡಿದ ದಂಪತಿಗೆ ರೆಸ್ಟೋರೆಂಟ್ ಸಿಬ್ಬಂದಿ ಬರೋಬ್ಬರಿ 1.47 ಲಕ್ಷ ಮೌಲ್ಯದ ವೈನ್ ಬಾಟಲಿಗಳನ್ನ ನೀಡಿದ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ. ಇನ್ನು 1.47 ಲಕ್ಷ ಮೌಲ್ಯದ ವೈನ್ ಆರ್ಡರ್ ಮಾಡಿದ ವಾಲ್ಸ್ಟ್ರೀಟ್ ಉದ್ಯಮಿಗೆ ಕಡಿಮೆ ಮೌಲ್ಯದ ವೈನ್ ಗಳನ್ನ ನೀಡಲಾಗಿದೆ.
ರೆಸ್ಟೋರೆಂಟ್ ಸಿಬ್ಬಂದಿಗೆ ತಮ್ಮಿಂದಾದ ತಪ್ಪಿನ ಬಗ್ಗೆ ಅರಿವಾಗ್ತಾ ಇದ್ದಂತೆ ಕೂಡಲೇ ಮಾಲೀಕ ಕೀತ್ಗೆ ಮಾಹಿತಿ ರವಾನಿಸಿದ್ದಾರೆ. ಆದರೆ ಇಬ್ಬರು ಗ್ರಾಹಕರು ಖುಷಿಯಾಗೇ ಇರೋದನ್ನ ನೋಡಿ ಮಾಲೀಕ ಕೀತ್ ಗೊಂದಲಕ್ಕೆ ಒಳಗಾಗಿದ್ದಾರೆ.
ಬಳಿಕ ಈ ವಿಷಯವನ್ನ ಉದ್ಯಮಿಗೆ ಹೇಳಲಾಯ್ತು. ಆದರೆ ಅವ್ರು ಕೂಡ ಯಾವುದೇ ತೊಂದರೆ ಮಾಡಲಿಲ್ಲ. ಆದರೆ ದಂಪತಿ ಮಾತ್ರ ರೆಸ್ಟೋರೆಂಟ್ ನ ಈ ತಪ್ಪಿನಿಂದ ಭಾರಿ ಖುಷಿಯಾಗಿದ್ರು. ಬ್ಯಾಂಕ್ ತಪ್ಪಾಗಿ ಹಣ ಕಳಿಸಿದ್ರೆ ಎಷ್ಟು ಖುಷಿಯಾಗುತ್ತೋ ಅಷ್ಟು ಸಂತೋಷವಾಯ್ತು ಅಂತಾ ಹೇಳಿದ್ರು. ಆದರೆ ಇಲ್ಲಿ ತಪ್ಪು ಮಾಡಿದ್ದು ಬ್ಯಾಂಕ್ ಅಲ್ಲ. ಬದಲಾಗಿ ನಾನು ಅಂತಾ ಕೀತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು 2000ನೇ ಇಸ್ವಿಯಲ್ಲಿ ಅಂತಾನೂ ಹೇಳಿದ್ದಾರೆ.