ಕೊರೊನಾ ವೈರಸ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಸಂಪೂರ್ಣ ವಿಶ್ವ ಇದೀಗ ರೂಪಾಂತರಿ ಕೊರೊನಾ ವೈರಸ್ ಭಯದಲ್ಲಿದೆ. ಈ ನಡುವೆ ಬಯೋಟೆಕ್ ಸಿಇಓ ಉಗುರ್ ಸಾಹಿನ್ ಇನ್ನೂ ಒಂದು ದಶಕಗಳ ಕಾಲ ಕೊರೊನಾ ವೈರಸ್ ನಮ್ಮ ಜೊತೆಯೇ ಇರಲಿದೆ ಎಂಬ ಆಘಾತಕಾರಿ ಮಾಹಿತಿಯನ್ನ ನೀಡಿದ್ದಾರೆ.
ಪತ್ರಿಕಾಗೋಷ್ಠಿಯೊಂದರಲ್ಲಿ ಕೊರೊನಾ ವೈರಸ್ ಇನ್ನೂ ಎಷ್ಟು ಸಮಯ ನಮ್ಮ ಮಧ್ಯೆ ಇರಬಹುದು ಎಂದು ಕೇಳಲಾದ ಪ್ರಶ್ನೆಗೆ ಸಾಹಿನ್ ಈ ಉತ್ತರ ನೀಡಿದ್ರು.
ಸಾಮಾನ್ಯ ಜೀವನಕ್ಕೆ ವಾಪಸ್ಸಾಗೋದು ಸುಲಭದ ಮಾತಲ್ಲ. ಮುಂದಿನ 10 ವರ್ಷಗಳ ಕಾಲ ಈ ವೈರಸ್ ನಮ್ಮೊಟ್ಟಿಗೇ ಇರಲಿದೆ ಎಂದು ಹೇಳಿದ್ದಾರೆ.
ಅಮೆರಿಕ ಔಷಧೀಯ ಸಂಸ್ಥೆ ದೈತ್ಯ ಫೈಜರ್ನೊಂದಿಗೆ ಸೇರಿದ ಬಯೋಟೆಕ್ ಕೊರೊನಾ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸಿದ್ದು ಈಗಾಗಲೇ ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ 45 ರಾಷ್ಟ್ರಗಳಲ್ಲಿ ತುರ್ತು ಅನುಮೋದನೆ ಪಡೆದುಕೊಂಡಿದೆ.