ವಾಷಿಂಗ್ಟನ್: ಕೊರೋನಾಗೆ ಅಗ್ಗದ ಬೆಲೆಯ ಸ್ಟಿರಾಯ್ಡ್ ಪರಮೌಷಧ ಆಗಿದ್ದು ಗಂಭೀರ ಸ್ಥಿತಿ ರೋಗಿಗಳಿಗೆ ಬಳಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.
ಲಕ್ಷಾಂತರ ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದೇ ವೇಳೆ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನಗಳು ಮುಂದುವರಿದಿದೆ. ಕಡಿಮೆ ಬೆಲೆಯಲ್ಲಿ ಎಲ್ಲೆಡೆ ದೊರೆಯುವ ಸ್ಟಿರಾಯ್ಡ್ ಗಳು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸುತ್ತವೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ರೋಗಿಗಳ ಚಿಕಿತ್ಸೆಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಸ್ಟಿರಾಯ್ಡ್ ಬಳಸುವಂತೆ ತಿಳಿಸಲಾಗಿದೆ.