ಕೊರೊನಾ ಲಸಿಕೆ ತಯಾರಿಸಲು ಭಾರತ, ರಷ್ಯಾ, ಬ್ರಿಟನ್, ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳ ವಿಜ್ಞಾನಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ಓಟದಲ್ಲಿ ಬ್ರಿಟನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಮುಂದಿದೆ. ಬ್ರಿಟನ್‌ನಲ್ಲಿಯೇ ಮತ್ತೊಂದು ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲಾಗಿದೆ. ಇದು ಉತ್ತಮ ಫಲಿತಾಂಶ ನೀಡಿದೆ.
ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು ಈ ಲಸಿಕೆ ಪ್ರಯೋಗ ಮಾಡಿದ್ದಾರೆ. ಇದು ಮಾನವ ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 300 ಜನರ ಮೇಲೆ ಈಗ ಪ್ರಯೋಗ ನಡೆಯಲಿದೆ.
ಮೊದಲು ಪ್ರಾಣಿಗಳ ಮೇಲೆ ಯಶಸ್ವಿ ಪ್ರಯೋಗದ ನಂತ್ರ ಸ್ವಯಂಸೇವಕರ ಮೇಲೆ ಪ್ರಯೋಗ ನಡೆದಿತ್ತು. ಈಗ ನಡೆಯುವ ಪರೀಕ್ಷೆಯಲ್ಲಿ 75 ವರ್ಷ ಮೇಲ್ಪಟ್ಟ ಕೆಲವರು ಇರಲಿದ್ದಾರೆಂದು ವಿಜ್ಞಾನಿಗಳು ಹೇಳಿದ್ದಾರೆ.