ಕೊರೊನಾ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ವಿಶ್ವ ನಾಯಕನಾಗಿ ಹೊರಹೊಮ್ಮುತ್ತಿದೆ. ಇಸ್ರೇಲ್ ತನ್ನ ಜನಸಂಖ್ಯೆಯ ಶೇಕಡಾ 11.5ರಷ್ಟು ಜನರಿಗೆ ಕೊರೊನಾ ಲಸಿಕೆ ಹಾಕಿದ ವಿಶ್ವದ ಮೊದಲ ದೇಶವಾಗಿದೆ. ಇಸ್ರೇಲ್ 60 ವರ್ಷಕ್ಕಿಂತ ಮೇಲ್ಪಟ್ಟ ಶೇಕಡಾ 41 ರಷ್ಟು ಜನರಿಗೆ ಕೊರೊನಾ ಲಸಿಕೆ ನೀಡಿದೆ.
ಯುಎಸ್ ನಲ್ಲಿ ಕೇವಲ ಶೇಕಡಾ 0.8 ರಷ್ಟು ಜನರಿಗೆ ಮತ್ತು ಬ್ರಿಟನ್ ನಲ್ಲಿ ಕೇವಲ ಶೇಕಡಾ 1.4 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿದೆ. ಇಸ್ರೇಲ್ ಡಿಸೆಂಬರ್ 20 ರಂದು ಲಸಿಕೆ ನೀಡಲು ಪ್ರಾರಂಭಿಸಿದೆ. ಸುಮಾರು 10 ದಿನಗಳಲ್ಲಿ ಇಸ್ರೇಲ್ ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಿದೆ. 1 ಮಿಲಿಯನ್ ಜನರಿಗೆ ಇಸ್ರೇಲ್‌ನಲ್ಲಿ ಫೈಜರ್‌ನ ಕೊರೊನಾ ಲಸಿಕೆ ನೀಡಲಾಗಿದೆ.
ಇಸ್ರೇಲ್ ಸುಮಾರು 87 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಆದರೆ ಇದುವರೆಗೂ ದೇಶದ ಜನಸಂಖ್ಯೆಯ ಶೇಕಡಾ 11.56 ರಷ್ಟು ಜನರಿಗೆ ಲಸಿಕೆ ಸಿಕ್ಕಿದೆ. ಹೆಚ್ಚಿನ ಜನರಿಗೆ ಕೊರೊನಾ ಲಸಿಕೆ ನೀಡಿರುವ ಕಾರಣ ಇನ್ಮುಂದೆ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಇಸ್ರೇಲ್ ಎರಡು ಬಾರಿ ಲಾಕ್ ಡೌನ್ ಘೋಷಣೆ ಮಾಡಿತ್ತು.