ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಹೇಗೆ ಹಬ್ಬುತ್ತಿದೆ ಎನ್ನವುದೇ ಅನೇಕರಿಗೆ ನಿಖರವಾಗಿ ತಿಳಿಯುತ್ತಿಲ್ಲ. ಇದೀಗ ಚೀನಾದ ಸಂಶೋಧನೆಯೊಂದರ ಪ್ರಕಾರ, ಟಾಯ್ಲೆಟ್ ಪೈಪ್ನಿಂದಲೂ ಕೊರೊನಾ ಹಬ್ಬಬಹುದು ಎನ್ನಲಾಗಿದೆ.
ಹೌದು, ಚೀನಾದ ಸಂಶೋಧಕರ ಪ್ರಕಾರ ಕೋವಿಡ್ -19 ವೈರಸ್ ಕೇವಲ ಗಾಳಿಯಿಂದ ಮಾತ್ರವಲ್ಲದೇ ಟಾಯ್ಲೆಟ್ ಪೈಪ್ಲೈನ್ ಮೂಲಕವೂ ಹಬ್ಬಬಹುದು. ಇದಕ್ಕೆ ಪುರಾವೆ ನೀಡಿರುವ ಅವರು, ಚೀನಾದ ಅಪಾರ್ಟ್ಮೆಂಟ್ ಒಂದರಲ್ಲಿ ಕುಟುಂಬದಲ್ಲಿ ಐವರಿಗೆ ಕೊರೊನಾ ಬಂದಿತ್ತು. ಆದರೆ ಅವರ ಮನೆಯ ಕೆಳಗಿದ್ದ ಖಾಲಿ ಮನೆಯ ಸಿಂಕ್ ಹಾಗೂ ಕಮೋಡ್ ಮೇಲೆಯೂ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ.
ಈ ರೀತಿ ಬಹುಕಾಲದಿಂದ ಖಾಲಿಯಿರುವ ಮನೆಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳಲು, ಕಾರಣವೇನು ಎಂದು ಹುಡುಕಿದಾಗ, ಖಾಲಿ ಮನೆಯ ಮೇಲಿದ್ದ ಸೋಂಕಿತರು ಟಾಯ್ಲೆಟ್ ಬಳಸಿ ಫ್ಲಶ್ ಮಾಡಿದಾಗ ಸೃಷ್ಟಿಯಾಗುವ ಒತ್ತಡದಿಂದ ವೈರಾಣುಗಳು ಹೀಗೆ ಚದುರಿರಬಹುದು ಎಂದಿದ್ದಾರೆ.