ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಮತ್ತೆ ಕೊರೊನಾ ಕಷ್ಟಕ್ಕೆ ಒಳಗಾಗಿದೆ. ಕಳೆದ 100ಕ್ಕೂ ಅಧಿಕ ದಿನಗಳಿಂದ ದೇಶ ಕೊರೊನಾ ಮುಕ್ತವಾಗಿತ್ತು.
ದಕ್ಷಿಣ ಒಕ್ಲೆಂಡ್ ನ ಒಂದೇ ಕುಟುಂಬದ ನಾಲ್ವರು ಈಗ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ ಎಂದು ಪ್ರಧಾನಿ ಜಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ. ಜೊತೆಗೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಘೋಷಿಸಿದ್ದಾರೆ.
102 ದಿನಗಳ ಬಳಿಕ ಇದು ಸ್ಥಳೀಯವಾಗಿ ಕಂಡುಬಂದ ಮೊದಲ ಕೋವಿಡ್ 19 ಪ್ರಕರಣವಾಗಿದೆ. ಇದರಿಂದ ಉತ್ತರ ಐಸ್ಲ್ಯಾಂಡ್ ನ ಒಕ್ಲೆಂಡ್ ನಲ್ಲಿ ಬುಧವಾರದಿಂದ “ಲೀವ್ ತ್ರಿ” ಘೋಷಣೆ ಮಾಡಲಾಗಿದೆ.
ಜನರು ಮನೆಯೊಳಗೇ ಇದ್ದು ಕೋವಿಡ್ ಹರಡುವುದನ್ನು ತಪ್ಪಿಸಬೇಕು. ನೀವು ಕೋವಿಡ್ ಪಾಸಿಟಿವ್ ಆದರೆ ನಿಮ್ಮ ಸುತ್ತಲೆಲ್ಲ ಪಾಸಿಟಿವ್ ಎಂದು ಪ್ರಧಾನಿ ಜಸಿಂಡಾ ಜನರಲ್ಲಿ ಮನವಿ ಮಾಡಿದ್ದಾರೆ.