ಕೊರೊನಾ ವೈರಸ್ ಸೋಂಕಿನ ಬಳಿಕ ಪುರುಷ ಹಾಗೂ ಸ್ತ್ರೀಯರ ದೇಹದಲ್ಲಿ ಯಾವ್ಯಾವ ರೀತಿಯ ಪರಿಣಾಮ ಬೀರಬಲ್ಲದು ಅನ್ನೋದ್ರ ಸಲುವಾಗಿ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಇದೀಗ ನಡೆಸಲಾದ ಹೊಸ ಅಧ್ಯಯನದಲ್ಲಿ ಪುರುಷ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ನಿಂದಾಗಿ ಅವರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.
ಸ್ತ್ರೀಯರ ಲೈಂಗಿಕ ಹಾರ್ಮೋನ್ ಆದ ಈಸ್ಟೊಸ್ಟೆರಾನ್ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಆದರೆ ಪುರುಷರ ಸೆಕ್ಸ್ ಹಾರ್ಮೋನ್ ಟೆಸ್ಟೊಸ್ಟೆರಾನ್ ಇದನ್ನ ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ ಮಹಿಳೆಯರಿಗಿಂತ ಹೆಚ್ಚು ಪುರುಷರೇ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಹೆಚ್ಚೆಚ್ಚು ಟೆಸ್ಟೊಸ್ಟೆರಾನ್ ಹಾರ್ಮೋನ್ ಹೊಂದಿರುವ ಪುರುಷರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದರಿಂದಾಗಿ ಸಾಂಕ್ರಾಮಿಕ ರೋಗಕ್ಕೆ ಬೇಗನೆ ತುತ್ತಾಗುತ್ತಾರೆ ಎಂದು ಅಧ್ಯಯನ ಹೇಳಿದೆ.
ಹಾಗಾದರೆ ಟೆಸ್ಟೊಸ್ಟೆರಾನ್ನಿಂದಾಗಿಯೇ ಪುರುಷರು ವೈರಸ್ ಹಾಗೂ ಬ್ಯಾಕ್ಟಿರೀಯಾ ಸೋಂಕಿಗೆ ತುತ್ತಾಗುತ್ತಾರಾ ಎಂದು ನೀವು ಕೇಳಬಹುದು. ಆದರೆ ಇದಕ್ಕೆ ಇನ್ನೂ ನಿಖರವಾದ ವೈಜ್ಞಾನಿಕ ಪುರಾವೆಗಳು ದೊರೆತಿಲ್ಲ.
ರೋಗ ನಿರೋಧಕ ಶಕ್ತಿಯ ಮೇಲೆ ಟೆಸ್ಟೊಸ್ಟೆರಾನ್ ಪರಿಣಾಮ ಬೀರುತ್ತದೆ ಎಂದು ಹೇಳಲು ಕೇವಲ ಒಂದೇ ರೀತಿಯ ಪ್ರತಿರಕ್ಷಣಾ ಕಾಯಗಳನ್ನ ಗಮನದಲ್ಲಿರಿಸಿ ಹೇಳಲಾಗಿದೆ. ಆದರೆ ಪ್ರತಿರಕ್ಷಣಾ ವ್ಯವಸ್ಥೆ ಅನ್ನೋದು ವಿಭಿನ್ನ ಜೀವಕೋಶ, ಅಂಗ ಹಾಗೂ ಅಂಗಾಂಶಗಳ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು ಇದನ್ನ ಎರಡು ರೀತಿಯಲ್ಲಿ ಅಂದರೆ ಸಹಜ ರೋಗನಿರೋಧಕ ಶಕ್ತಿ ಹಾಗೂ ಅಡಪ್ಟಿವ್ ಪ್ರತಿಕಾಯಗಳು.
ಸಹಜ ಪ್ರತಿರಕ್ಷಣಾ ಕಾಯಗಳು ರೋಗದ ವಿರುದ್ಧ ಹೋರಾಡುವ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತವೆ. ಇಂದು ಅಡಪ್ಟಿವ್ ಪ್ರತಿಕಾಯಗಳನ್ನ ಅಭಿವೃದ್ಧಿ ಮಾಡೋದ್ರ ಜೊತೆಗೆ ಸೋಂಕಿನ ತೀವ್ರತೆಯನ್ನ ಮಂದ ಮಾಡುತ್ತವೆ.
ಅಡಪ್ಟಿವ್ ರೋಗ ನಿರೋಧಕ ಶಕ್ತಿಯು ನಿರ್ದಿಷ್ಟ ಸೋಂಕನ್ನ ಗುರುತಿಸೋಕೆ ಹೆಚ್ಚು ಸಮಯವನ್ನ ತೆಗೆದುಕೊಳ್ಳುತ್ತದೆ. ಬಳಿಕ ಇದು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಶಕ್ತಿಯುತವಾಗಿ ವೈರಾಣುಗಳ ವಿರುದ್ಧ ಹೋರಾಡುತ್ತದೆ.
ಅಡಪ್ಟಿವ್ ಪ್ರತಿಕಾಯಗಳು ದೇಹದ ಶಕ್ತಿಯನ್ನ ಬಳಸಿಕೊಳ್ಳುತ್ತವೆ. ಟೆಸ್ಟೊಸ್ಟೆರಾನ್ ಹಾರ್ಮೋನ್ ಹೆಚ್ಚು ಇದ್ದಷ್ಟು ಆ ವ್ಯಕ್ತಿಯ ಸ್ನಾಯುವಿನ ಶಕ್ತಿ, ಲೈಂಗಿಕ ಆಸಕ್ತಿ ಹಾಗೂ ಸೇರಿದಂತೆ ವಿವಿಧ ರೀತಿಯ ಶಕ್ತಿ ಖರ್ಚು ಮಾಡುವ ಕೆಲಸಗಳತ್ತ ಆಸಕ್ತಿ ಹೊಂದುತ್ತಾನೆ. ಇದರಿಂದ ಅಡಪ್ಟಿವ್ ಪ್ರತಿಕಾಯಗಳಿಗೆ ಶಕ್ತಿ ಸಿಗದೇ ಹೋಗಬಹುದು. ದೇಹಕ್ಕೆ ಅನಾರೋಗ್ಯ ಬಂದಾಗ ಟೆಸ್ಟೊಸ್ಟೆರಾನ್ ಮಟ್ಟ ಕಡಿಮೆಯಾಗುತ್ತದೆ. ಬಹುಶಃ ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಬಲಪಡಿಸಲು ದೇಹದ ಶಕ್ತಿ ವಿನಿಯೋಗವಾಗಬಹುದು ಎನ್ನಲಾಗಿದೆ.