ಕೊರೊನಾ ವೈರಸ್ ಕುರಿತಂತೆ ಮತ್ತೊಂದು ಆಘಾತಕಾರಿ ಮಾಹಿತಿ ಗೊತ್ತಾಗಿದೆ. ಮೊಬೈಲ್ ಮತ್ತು ನೋಟಿನ ಮೇಲೆ ಕೊರೊನಾ ಸೋಂಕು 28 ದಿನ ಇರುತ್ತದೆ.
20 ಡಿಗ್ರಿ ತಾಪಮಾನವಿದ್ದರೆ ವೈರಸ್ ಸಕ್ರಿಯವಾಗಿರುತ್ತದೆ. ಆದರೆ, 40 ಡಿಗ್ರಿ ತಾಪಮಾನದಲ್ಲಿ ಬೇಗನೆ ನಾಶವಾಗುತ್ತದೆ. ಟಚ್ ಸ್ಕ್ರೀನ್ ಮೊಬೈಲ್ ಪರದೆ, ಕಾಗದದ ನೋಟುಗಳಲ್ಲಿ ಕೊರೊನಾ ಸೋಂಕು ಜೀವಂತವಾಗಿರುತ್ತದೆ. ಚಳಿಗಾಲ ಸಮೀಪಿಸುತ್ತಿರುವುದರಿಂದ ಅಪಾಯದ ಭೀತಿ ಎದುರಾಗಿದೆ ಎಂದು ಹೇಳಲಾಗಿದೆ.
ಕಡಿಮೆ ತಾಪಮಾನದಲ್ಲಿ, ರಂದ್ರಗಳು ಇಲ್ಲದ ವಸ್ತುಗಳ ಮೇಲೆ, ಗಾಜು, ಸ್ಟೈನ್ಲೆಸ್ ಸ್ಟೀಲ್, ವೀನೈಲ್ ಮೊದಲಾದ ಮೆತ್ತನೆಯ ಮೇಲ್ಮೈಗಳ ಮೇಲೆ ಅಧಿಕ ಸಮಯ ಕೊರೊನಾ ವೈರಸ್ ಜೀವ ಹೊಂದಿರುತ್ತದೆ. ಸಾಮಾನ್ಯವಾಗಿ ವೈರಸ್ ಗಳು ಇಂತಹ ವಸ್ತುಗಳ ಮೇಲೆ 17 ದಿನದವರೆಗೂ ಬದುಕಿರುತ್ತವೆ. ಆದರೆ ಕೊರೊನಾ ಸೋಂಕು 28 ದಿನದವರೆಗೂ ಇರುತ್ತದೆ ಎಂದು ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ ಎಂದು ಹೇಳಲಾಗಿದೆ.