ಕೊರೊನಾ ವೈರಸ್ ಬಗ್ಗೆ ವಿಶ್ವದ ಸುಮಾರು 4 ಸಾವಿರ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ದೊಡ್ಡ ಮನವಿ ಮಾಡಿದ್ದಾರೆ. ಕೊರೊನಾ ಅಪಾಯ ಕಡಿಮೆಯಿರುವ ಜನರ ಜೀವನ ಸಾಮಾನ್ಯ ಸ್ಥಿತಿಗೆ ಬರಬೇಕೆಂದು ಆಂಟಿ-ಲಾಕ್‌ಡೌನ್ ಅರ್ಜಿಯಲ್ಲಿ ತಜ್ಞರು ಹೇಳಿದ್ದಾರೆ.
ಕೊರೊನಾ ಅಪಾಯ ಹೆಚ್ಚಿರುವ ಜನರನ್ನು ಬಿಟ್ಟು ಬೇರೆಯವರ ಜೀವನ ಸಹಜವಾಗಬೇಕು. ವಯಸ್ಸಾದವರು, ಅಧಿಕ ತೂಕ ಹೊಂದಿರುವವರು, ಮೊದಲೇ ರೋಗದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿದ್ದರೆ ಸಾಕು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಜನರು ಸಾಮಾನ್ಯ ಜೀವನದಿಂದ ದೂರವಿದ್ದು, ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕ್ಸ್ ಫರ್ಡ್, ನಾಟಿಂಗ್ಹ್ಯಾಮ್, ಎಡಿನ್‌ಬರ್ಗ್, ಕೇಂಬ್ರಿಡ್ಜ್ ಸೇರಿದಂತೆ ಯುಕೆ ವಿಶ್ವವಿದ್ಯಾಲಯದ ತಜ್ಞರು ಮನವಿ ಮಾಡಿದ್ದಾರೆ.
ಜನರ ಅನೇಕ ಕೆಲಸಗಳು ಕೊರೊನಾದಿಂದ ನಿಂತಿದೆ. ಮಕ್ಕಳಿಗೆ ವ್ಯಾಕ್ಸಿನೇಷನ್ ಹಾಕಿಸುವವರ ಸಂಖ್ಯೆ ಕ್ಷೀಣಿಸಿದೆ. ಕ್ಯಾನ್ಸರ್ ಸೇರಿದಂತೆ ಕೆಲ ಗಂಭೀರ ಖಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ಸಿಗ್ತಿಲ್ಲವೆಂದು ಅರ್ಜಿಯಲ್ಲಿ ಹೇಳಲಾಗಿದೆ.
ಆದ್ರೆ ಕೆಲ ತಜ್ಞರು ಅರ್ಜಿ ವಿರುದ್ಧ ದನಿ ಎತ್ತಿದ್ದಾರೆ. ಕೊರೊನಾ ವೈರಸ್ ನಿರ್ಲಕ್ಷ್ಯಿಸಿದ್ರೆ ಅದು ದೈಹಿಕ ಮತ್ತು ಮಾನಸಿಕ ಎರಡೂ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.