ಕೊರೊನಾ ವೈರಸ್ ನಿಂದ ಜಗತ್ತನ್ನು ಉಳಿಸಲು ನೂರಾರು ಲಸಿಕೆಗಳನ್ನು ಕಂಡು ಹಿಡಿಯುವ ಕೆಲಸ ನಡೆದಿದೆ. ಈವರೆಗೂ ಯಾವುದೇ ಸರಿಯಾದ ಲಸಿಕೆ ಮಾರುಕಟ್ಟೆಗೆ ಬಂದಿಲ್ಲ. ಕೆಲ ವಿಜ್ಞಾನಿಗಳ ಪ್ರಕಾರ ಇಂಜೆಕ್ಷನ್ ರೂಪದಲ್ಲಿ ಔಷಧಿ ದೇಹದ ಒಳಗೆ ಸೇರುವ ಬದಲು ಮೂಗಿನ ಮೂಲಕ ದೇಹಕ್ಕೆ ಹೋಗುವ ಲಸಿಕೆ ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎನ್ನುತ್ತಿದ್ದಾರೆ.
ಕ್ಲಿನಿಕಲ್ ಪ್ರಯೋಗಗಳಲ್ಲಿನ ಹೆಚ್ಚಿನ ಲಸಿಕೆಗಳನ್ನು ಚುಚ್ಚುಮದ್ದಿನ ರೂಪದಲ್ಲಿ ತರಲಾಗ್ತಿದೆ ಎಂದು ಅಲಬಾಮಾದ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ರೋಗನಿರೋಧಕ ಮತ್ತು ಲಸಿಕೆ ಡೆವಲಪರ್ ಫ್ರಾನ್ಸಿಸ್ ಹೇಳುತ್ತಾರೆ. ಲಸಿಕೆಯನ್ನು ತೋಳಿನ ಮೇಲಿನ ಭಾಗಕ್ಕೆ ಹಾಕಲಾಗುತ್ತದೆ. ಸ್ನಾಯುವಿನೊಳಗೆ ಚುಚ್ಚುಮದ್ದು ಪ್ರತಿರಕ್ಷೆಗೆ ಉತ್ತಮ ಪ್ರತಿಕ್ರಿಯೆ ನೀಡುತ್ತದೆ.
ಆದರೆ ಕೊರೊನಾ ವೈರಸ್ ನಂತಹ ಉಸಿರಾಟದ ವೈರಸ್ ಸೋಂಕು ಸಾಮಾನ್ಯವಾಗಿ ಮೂಗು ಅಥವಾ ಗಂಟಲಿನಿಂದ ಪ್ರಾರಂಭವಾಗುತ್ತದೆ. ಇಂತಹ ಸೋಂಕುಗಳು ರೋಗನಿರೋಧಕ ಶಕ್ತಿಯನ್ನು ಸುತ್ತುವರಿಯುವ ಮೊದಲು ಮೂಗು ಮತ್ತು ಗಂಟಲಿನಲ್ಲಿ ದೀರ್ಘಕಾಲ ಉಳಿಯುತ್ತವೆ. ಸ್ನಾಯುವಿನೊಳಗೆ ಚುಚ್ಚುಮದ್ದನ್ನು ಹಾಕುವುದ್ರಿಂದ ರೋಗಿಯನ್ನು ದೊಡ್ಡ ಅಪಾಯದಿಂದ ರಕ್ಷಿಸಬಹುದು. ಆದರೆ ಗಂಟಲು ಮತ್ತು ಮೂಗಿಗೆ ಔಷಧಿ ಬೀಳದ ಕಾರಣ ಸೋಂಕಿನ ಹರಡುವಿಕೆಯ ಅಪಾಯ ಇನ್ನೂ ಉಳಿಯುತ್ತದೆ ಎಂದು ಸಂಶೋಧಕರು ಹೇಳ್ತಿದ್ದಾರೆ. ಮೂಗಿಗೆ ನೇರವಾಗಿ ಹಾಕುವ ಲಸಿಕೆ ವಿಭಿನ್ನ ರೀತಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದವರು ಹೇಳಿದ್ದಾರೆ.