ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಲಕ್ಷಣಗಳು ಕೂಡ ದಿನಕ್ಕೊಂದರಂತೆ ಬದಲಾಗ್ತಿದೆ. ಈಗ ಬ್ರಿಟಿಷ್ ತಜ್ಞರು ಮತ್ತೊಂದು ಕೊರೊನಾ ಲಕ್ಷಣದ ಬಗ್ಗೆ ಹೇಳಿದ್ದಾರೆ.
ಜ್ವರ, ಕೆಮ್ಮು, ನೆಗಡಿ, ವಾಸನೆ ಬರದಿರುವುದು ಮತ್ತು ರುಚಿ ಗೊತ್ತಾಗದಿರುವುದು ಕೊರೊನಾ ಲಕ್ಷಣ ಎನ್ನಲಾಗಿತ್ತು. ಈಗ ಕೊರೊನಾ ಶ್ರವಣ ಶಕ್ತಿಯನ್ನೂ ಹಾಳು ಮಾಡಲಿದೆ ಎಂಬ ಸುದ್ದಿಯನ್ನು ತಜ್ಞರು ಹೇಳಿದ್ದಾರೆ. ಕೊರೊನಾ ಪೀಡಿತ ವ್ಯಕ್ತಿಗಳ ಶ್ರವಣ ಶಕ್ತಿ ಕಡಿಮೆಯಾಗುತ್ತದೆ. ಅವರಿಗೆ ಸರಿಯಾಗಿ ಕಿವಿ ಕೇಳುವುದಿಲ್ಲವೆಂದು ಹೇಳಲಾಗಿದೆ.
ಐಸಿಯುವಿನಲ್ಲಿ ಚಿಕಿತ್ಸೆ ಪಡೆದು ಬಂದ ವ್ಯಕ್ತಿಯೊಬ್ಬ ಒಂದು ವಾರದ ನಂತ್ರ ಈ ಸಮಸ್ಯೆ ಎದುರಿಸಿದ್ದನಂತೆ. ಆತನ ಎಡ ಕಿವಿ ಕೇಳ್ತಿರಲಿಲ್ಲವಂತೆ. ಆದ್ರೆ ಕಿವಿಯಲ್ಲಿ ಯಾವುದೇ ಸಮಸ್ಯೆ ಕಾಣಿಸಲಿಲ್ಲ. ಹಾಗಾಗಿ ವೈದ್ಯರು ಔಷಧಿ ನೀಡಿಲ್ಲವಂತೆ. ಮತ್ತಷ್ಟು ತಪಾಸಣೆ ನಡೆಸಿದಾಗ ಕಿವಿ ನರಗಳು ಹಾನಿಗೊಳಗಾಗಿರುವುದು ಪತ್ತೆಯಾಗಿದೆ. ಕೊರೊನಾ ಕಿವಿ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಆದ್ರೆ ಬ್ರಿಟನ್ ನಲ್ಲಿ ಇದು ಮೊದಲ ಪ್ರಕರಣವಾಗಿದೆ.