ಕೋವಿಡ್-19 ಸೋಂಕಿನಿಂದ ಸುರಕ್ಷಿತವಾಗಿರಲು ಏನೆಲ್ಲಾ ಮಾಡಬೇಕು ಎಂಬ ಅನೇಕ ಥಿಯರಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಲೇ ಇವೆ.
ಕೊರೋನಾ ವೈರಸ್ ವಿರುದ್ಧ ಅತ್ಯುತ್ತಮ ರಕ್ಷಣೆಯಾಗಿ ಮಾಸ್ಕ್ ಕೆಲಸ ಮಾಡುವುದು ಎಲ್ಲರಿಗೂ ತಿಳಿದ ವಿಚಾರ. ಕೋವಿಡ್-19 ಮಾತ್ರವಲ್ಲದೇ ಶ್ವಾಸಕೋಶದ ಮೇಲೆ ದಾಳಿ ಮಾಡುವ ವೈರಾಣುಗಳಿಂದಲೂ ಮಾಸ್ಕ್‌ಗಳು ರಕ್ಷಣೆ ಕೊಡುತ್ತವೆ.
ಇದೀಗ ಡಬಲ್ ಮಾಸ್ಕ್ ಧರಿಸಿದಲ್ಲಿ ಕೊರೋನಾ ವೈರಸ್‌ನಿಂದ ಡಬಲ್ ಸುರಕ್ಷೆ ಸಿಗಲಿದೆ ಎಂಬ ಹೊಸ ಥಿಯರಿಯೊಂದು ಸದ್ದು ಮಾಡುತ್ತಿದೆ. ಅಮೆರಿಕ ಹಾಗೂ ಬ್ರಿಟನ್‌ಗಳಂಥ ದೇಶಗಳಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಹೀಗೆ ಡಬಲ್ ಮಾಸ್ಕ್ ಧರಿಸುವುದು ಟ್ರೆಂಡ್ ಆಗುತ್ತಿದೆ.
ಕೊರೊನಾ ‘ಲಸಿಕೆ’ ಪಡೆದು ಅಡ್ಡ ಪರಿಣಾಮವಾದವರಿಗೆ ಇಲ್ಲ ವಿಮೆ ಸೌಲಭ್ಯ…!
ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡೆನ್ ಅಲ್ಲದೇ ಅನೇಕ ಖ್ಯಾತ ಕ್ರೀಡಾ ಪಟುಗಳು ಸಹ ಹೀಗೆ ಡಬಲ್ ಮಾಸ್ಕ್ ಹಾಕುತ್ತಿರುವುದು ಸುದ್ದಿಯಾಗುತ್ತಿದೆ.
ವೈದ್ಯಕೀಯ ದೃಷ್ಟಿಕೊನದಿಂದಲೂ ಸಹ, ಒಂದಕ್ಕಿಂತ ಎರಡು ಮಾಸ್ಕ್ ಧರಿಸುವುದರಿಂದ ವೈರಾಣು ಪಸರುವ ವಿರುದ್ಧ ದುಪ್ಪಟ್ಟು ರಕ್ಷಣೆ ಸಿಗಲಿದೆ. ಆದರೆ ಇನ್ನಷ್ಟು ತಜ್ಞರ ಪ್ರಕಾರ, ಡಬಲ್ ಮಾಸ್ಕ್‌ನಿಂದ ಉಸಿರಾಟದ ಮೇಲೆ ಹೊರಹೊಮ್ಮುವ ತೇವಾಂಶವು ಮಾಸ್ಕ್‌ಗಳ ನಡುವೆ ಸಿಕ್ಕಿ ಹಾಕಿಕೊಳ್ಳುತ್ತದೆ. ಜೊತೆಗೆ ಹೀಗೆ ಮಾಡುವುದರಿಂದ ಮಾಸ್ಕ್‌ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಇನ್ನಷ್ಟು ಗಮನ ಹರಿಸಬೇಕಾಗುತ್ತದೆ.
ದೊಡ್ಡ ದೊಡ್ಡ ಅಪೇರಲ್ ಬ್ರಾಂಡ್‌ಗಳೂ ಸಹ 2-3 ಪದರಗಳ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳ ಬಳಕೆಯಿಂದ ವೈರಸ್ ವಿರುದ್ಧ ಹೆಚ್ಚಿನ ರಕ್ಷಣೆ ಸಿಗಲಿದೆ ಎಂದು ಹೇಳಲಾಗುತ್ತದೆ.