ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಮತ್ತೆ ಅಬ್ಬರ ಶುರು ಮಾಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಇದ್ರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಮಧ್ಯೆ ಖುಷಿ ಸುದ್ದಿಯೊಂದಿದೆ. ಯುರೋಪಿಯನ್ ದೇಶ ಬೆಲ್ಜಿಯಂನಲ್ಲಿ ಕೊರೊನಾ ಲಸಿಕೆ ಉತ್ಪಾದನೆ ಪ್ರಾರಂಭವಾಗಿದೆ.
ಪ್ರಸಿದ್ಧ ಔಷಧಿ ತಯಾರಕ ಕಂಪನಿ ಫೈಜರ್, ಬೆಲ್ಜಿಯಂನಲ್ಲಿ ಲಸಿಕೆ ಉತ್ಪಾದನೆ ಶುರು ಮಾಡಿದೆ. ಈ ವರ್ಷದ ಅಂತ್ಯದೊಳಗೆ 10 ಕೋಟಿ ಲಸಿಕೆ ತಯಾರಿಸುವುದಾಗಿ ಅಮೆರಿಕಾ ಮೂಲದ ಫೈಜರ್ ಹೇಳಿದೆ. ಪ್ರತಿಯೊಬ್ಬ ವ್ಯಕ್ತಿಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಲಾಗುವುದು. ಫೈಜರ್, ಜರ್ಮನಿ ಜೊತೆ ಸೇರಿ 44 ಸಾವಿರ ಜನರ ಮೇಲೆ ಪ್ರಯೋಗ ಶುರು ಮಾಡಿದೆ.
ಮುಂದಿನ ತಿಂಗಳಲ್ಲಿ ಲಸಿಕೆ ತುರ್ತು ಅನುಮೋದನೆಗೆ ಅಮೆರಿಕಾ ಅರ್ಜಿ ಸಲ್ಲಿಸಲಿದೆ. ಈ ರೇಸ್ ನಲ್ಲಿ ಫೈಜರ್ ಮೊದಲ ಸ್ಥಾನದಲ್ಲಿರಲಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಕೂಡ ರೇಸ್ ನಲ್ಲಿ ಮುಂದಿದೆ. ಪರೀಕ್ಷೆ ಮೂರನೇ ಹಂತದಲ್ಲಿದೆ. ಡಿಸೆಂಬರ್‌ನಲ್ಲಿ ಲಸಿಕೆ ಬರುವ ನಿರೀಕ್ಷೆಯಿದೆ ಎಂದು ಬ್ರಿಟನ್‌ನ ಉಪ ಮುಖ್ಯ ವೈದ್ಯಕೀಯ ಅಧಿಕಾರಿ ಜೊನಾಥನ್ ವ್ಯಾನ್ ಟಾಮ್ ಕಳೆದ ವಾರ ಹೇಳಿದ್ದರು.