
ಕೊರೊನಾ ವೈರಸ್ ಪ್ರಪಂಚದಾದ್ಯಂತ ಹಾನಿಯುಂಟು ಮಾಡಿದೆ. ಕೊರೊನಾ ವೈರಸ್ ರೂಪಾಂತರಗೊಳ್ಳುತ್ತಿದೆ. ಈ ರೂಪಾಂತರದಿಂದಾಗಿ ವಿಜ್ಞಾನಿಗಳಿಗೆ ತಲೆಬಿಸಿ ಶುರುವಾಗಿದೆ. ಈಗಾಗಲೇ ಕಂಡು ಹಿಡಿದಿರುವ ಲಸಿಕೆ ಹೊಸ ರೂಪಾಂತರದ ಮೇಲೆ ಪರಿಣಾಮ ಬೀರಲಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದ್ರ ಮಧ್ಯೆ ಖುಷಿ ಸುದ್ದಿಯೂ ಸಿಕ್ಕಿದೆ. ಎಲ್ಲ ರೂಪಾಂತರದ ಮೇಲೂ ಪರಿಣಾಮ ಬೀರಬಲ್ಲ ಲಸಿಕೆ ತಯಾರಿ ನಡೆಯಲಿದೆ ಎಂಬ ಸುದ್ದಿ ಹೊರಹೊಮ್ಮಿದೆ.
ಈ ಹೊಸ ಆಂಟಿ-ಕೋವಿಡ್ -19 ಲಸಿಕೆಯನ್ನು ಕೋತಿಗಳು ಮತ್ತು ಇಲಿಗಳ ಮೇಲೆ ಬಳಸಲಾಗಿದೆ. ಈ ಲಸಿಕೆ ಬ್ರಿಟನ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನ ರೂಪಾಂತರದ ವಿರುದ್ಧ ರಕ್ಷಣೆ ನೀಡಲಿದೆ ಎಂಬುದು ಸಾಬೀತಾಗಿದೆ. ಈ ಕೊರೊನಾ ಲಸಿಕೆ ಸಾಂಕ್ರಾಮಿಕಕ್ಕೆ ಕಾರಣವಾಗುವ ಎಲ್ಲಾ ರೀತಿಯ ಸೋಂಕಿನ ವಿರುದ್ಧ ಕೆಲಸ ಮಾಡುತ್ತದೆ ಎನ್ನಲಾಗಿದೆ. ಸಂಶೋಧನೆಯ ಪ್ರಕಾರ, ಈ ಲಸಿಕೆ ಮಾನವರ ಮೇಲೂ ಬಹಳ ಪರಿಣಾಮಕಾರಿಯಾಗಿದೆ. ಎಲ್ಲಾ ರೀತಿಯ ಕೊರೊನಾ ವೈರಸ್ ಮೇಲೆ ಪರಿಣಾಮಕಾರಿಯಾಗಿದೆ.
ಯುಎಸ್ ಮೂಲದ ಡ್ಯೂಕ್ ಯೂನಿವರ್ಸಿಟಿ ಹ್ಯೂಮನ್ ಲಸಿಕೆ ಸಂಸ್ಥೆಯ ಬಾರ್ಟನ್ ಎಂ. ಹೇನ್ಸ್, ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನ ವೈರಸ್ ಸ್ವರೂಪವನ್ನು ನಿಷ್ಕ್ರಿಯಗೊಳಿಸಬಹುದು ಎಂದಿದ್ದಾರೆ.