ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿರುವ ದೈತ್ಯ ಕೋರಲ್ ಹವಳದ ದಿಬ್ಬವೊಂದು 1,600 ಅಡಿಗಳಷ್ಟು ಉದ್ದವಿದ್ದು, ಅಕ್ಟೋಬರ್ 20ರಂದು ಪತ್ತೆ ಮಾಡಲಾಗಿದೆ.
’ಫಾಕರ್’ ಹೆಸರಿನ ನೌಕೆಯೊಂದರ ಮೇಲಿಂದ ವಿಜ್ಞಾನಿಗಳು ಈ ಹವಳವನ್ನು ಪತ್ತೆ ಮಾಡಿದ್ದಾರೆ. ಗ್ರೇಟ್ ಬ್ಯಾರಿಯರ್ ರೀಫ್ ಪ್ರದೇಶದ ಸಮುದ್ರದ ತಳದ ಮ್ಯಾಪಿಂಗ್ ಮಾಡುತ್ತಿದ್ದ ವೇಳೆ ಈ ಹವಳ ಪತ್ತೆಯಾಗಿದೆ. ’ಸೆಬಾಸ್ಟಿಯನ್’ ಹೆಸರಿನ ರೋಬೊಟ್ ಒಂದನ್ನು ಬಳಸುವ ಮೂಲಕ ಈ ಹವಳದ ವಿಡಿಯೋ ರೆಕಾರ್ಡಿಂಗ್ ಮಾಡಲಾಗಿದೆ. Schmidt Ocean Instituteನ ಜಾಲತಾಣ ಹಾಗೂ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಬಿತ್ತರಿಸಲಾಗಿದೆ.
ಉತ್ತರ ಕ್ವೀನ್ಸ್‌ಲೆಂಡ್ ಪ್ರದೇಶದಲ್ಲಿ ಕಳೆದ 120 ವರ್ಷಗಳಿಂದ ಪತ್ತೆಯಾದ ಮೊದಲ ಹವಳ ಇದಾಗಿದೆ. ಇದು ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಕಟ್ಟಡ, ಸಿಡ್ನಿ ಟವರ್ ಹಾಗೂ ಪಟ್ರೋನಾಸ್ ಟವರ್‌ಗಿಂತಲೂ ಎತ್ತರವಾದ ರಚನೆಯಾಗಿದೆ.