ಹೆದ್ದಾರಿಯಲ್ಲಿ ಬಿಳಿ ಹುಲಿಯೊಂದು ಕಾಣಿಸಿಕೊಂಡಿದ್ದಾಗಿ ಮೇರಿಲ್ಯಾಂಡ್ ಪೊಲೀಸ್ ಸಹಾಯವಾಣಿ 911 ಕ್ಕೆ ಕರೆಯೊಂದು ಬರುತ್ತದೆ. ಕರೆಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು.
ಚಾಲಕನೊಬ್ಬ ಕರೆ ಮಾಡಿ, ಮಾಂಟರ್ಸ್ ರಸ್ತೆಯ I-270 ಬಳಿ ಬಿಳಿ ಹುಲಿಯೊಂದು ಗೋಡೆಯೇರಿ ಕುಳಿತಿದೆ ಎಂದು ಆತಂಕದಿಂದ ಹೇಳಿದ. ಇದನ್ನು ಕೇಳಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಪಾಂಡಾ ಜೊತೆಗೆ ಫುಡ್ ಡೆಲಿವರಿಗೆ ಹೊರಟ ಚಾಲಕ….!
ಹೋಗಿ ನೋಡಿದರೆ, ಇನ್ನೇನು ಜಿಗಿದು ದಾಳಿ ಮಾಡಲು ಸಿದ್ಧಗೊಂಡು ಬೇಟೆಗಾಗಿ ಕಾದು ಕುಳಿತ ಬಿಳಿ ಹುಲಿ ಕಣ್ಣಿಗೆ ಬಿದ್ದಿದೆ. ಸ್ವಲ್ಪ ಗಮನಿಸಿದ ನೋಡಿದಾಗ ಅದು ನಿಜವಾದ ಹುಲಿಯಲ್ಲ ಎಂಬುದು ಅವರ ಅರಿವಿಗೆ ಬಂದು ಬೇಸ್ತು ಬಿದ್ದಿದ್ದಾರೆ.
ಜೀವಂತ ಹುಲಿಯಂತಿರುವ ಪ್ರತಿಮೆಯನ್ನು ಯಾರೋ ಅಲ್ಲಿಟ್ಟಿದ್ದಾರೆ. ಕೊನೆಗೆ ಅದನ್ನು ತಪಾಸಣೆ ಮಾಡಿ, ಠಾಣೆಗೆ ತಂದಿಡಲಾಗಿದೆ. ಸ್ವತಃ ಪೊಲೀಸರೇ ಟ್ವಿಟ್ಟರ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ನೆಟ್ಟಿಗರು ಥರಾವರಿ ಕಮೆಂಟ್ ಗಳನ್ನು ಮಾಡಿದ್ದಾರೆ.