ಮೈಯಲ್ಲಿ ಒಂದು ಬುಲೆಟ್ ಹೊಕ್ಕಿದರೆ ಅದನ್ನು ತೆಗೆಯುವ ತನಕ ನರಕ ಯಾತನೆ ಇದ್ದೇ ಇರುತ್ತದೆ. ಒಂದೇ ಒಂದು ಬುಲೆಟ್ ಬಿದ್ದರೆ ಸಾಕು ಜೀವ ಹೋಗಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿಯ ತಲೆಯಲ್ಲಿ ಗುಂಡು ಇದೆ. ಆದರೂ ಹಲವಾರು ವರ್ಷಗಳಿಂದ ಎಲ್ಲರಂತೆ ಜೀವನ ನಡೆಸುತ್ತಿದ್ದಾರೆ.
ಹೌದು, ಈ ಘಟನೆ ನಡೆದಿರುವುದು ರಷ್ಯಾದಲ್ಲಿ. ಇಲ್ಲಿನ ಮಾಜಿ ಅಧಿಕಾರಿಯೊಬ್ಬರಿಗೆ 10 ವರ್ಷಗಳಿಂದ ತಲೆಯಲ್ಲಿ ಗುಂಡು ಇದೆ. ಹತ್ತು ವರ್ಷಗಳ ಹಿಂದೆ ಜೂಜು ಅಡ್ಡದಲ್ಲಿ ನಡೆದ ದರೋಡೆಯಲ್ಲಿ ಖದೀಮರನ್ನು ಹಿಡಿಯುವಾಗ ಗುಂಡಿನ ಚಕಮಕಿ ನಡೆದಿದೆ. ಈ ಚಕಮಕಿಯಲ್ಲಿ ಆಗ ಪೊಲೀಸ್ ಅಧಿಕಾರಿಯಾಗಿದ್ದ ವ್ಲಾಡಿಮಿರ್ ಅವರ ತಲೆಗೆ ಗುಂಡು ತಗುಲಿದೆ. ತಕ್ಷಣ ಅವರಿಗೆ ಪ್ರಜ್ಞೆ ತಪ್ಪಿದ್ದು, ಒಂಬತ್ತು ದಿನಗಳ ನಂತರ ಮತ್ತೆ ಪ್ರಜ್ಞೆ ಬಂದಿದೆ.
ಆದರೆ ಈ ಗುಂಡನ್ನು ವೈದ್ಯರು ತೆಗೆಯುವಂತಹ ಕೆಲಸಕ್ಕೆ ಮುಂದಾಗಿಲ್ಲ. ಏಕೆಂದರೆ ಗುಂಡನ್ನು ಮೆದುಳಿನಿಂದ ತೆಗೆದರೆ ಜೀವಕ್ಕೆ ಹಾನಿಯುಂಟಾಗಬಹುದು ಎಂಬ ಕಾರಣದಿಂದ ಹಾಗೆ ಬಿಟ್ಟಿದ್ದಾರಂತೆ. ಕಳೆದ 10 ವರ್ಷಗಳಿಂದ ಎಲ್ಲರಂತೆ ಚೆನ್ನಾಗಿದ್ದಾರೆ ವ್ಲಾಡಿಮಿರ್. ಇನ್ನು ಇವರ ತಲೆಯಲ್ಲಿ ಗುಂಡು ಹಾಗೆಯೇ ಇರುವುದು ಎಕ್ಸ್‌ರೇ ಮೂಲಕ ಗೊತ್ತಾಗುತ್ತದೆ.