ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವಿಚಾರವಾಗಿ ನಡೆದ ಗಲಭೆ ಎಲ್ಲೆಡೆ ಸುದ್ದಿಯಾಗಿದೆ. ಅಂಥ ಗಂಭೀರ ಪರಿಸ್ಥಿತಿ ಸಂದರ್ಭದಲ್ಲೂ ಪೊಲೀಸರಿಗೆ ನೆರವಾದ ವ್ಯಕ್ತಿಯೊಬ್ಬರ ಬಗ್ಗೆ ಈಗ ಜಾಲತಾಣದಲ್ಲಿ ಚರ್ಚೆ ನಡೆದಿದೆ. ಆತನ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕಾ ರಾಜಧಾನಿಯಲ್ಲಿ ಗಲಾಟೆ ನಡೆಸಿದ್ದರು. ಗಲಾಟೆಯಲ್ಲಿ ಕಟ್ಟಡದ ಗಾಜುಗಳು ಒಡೆದಿದ್ದವು. ಬಟ್ಟೆಗಳು, ಬಂಟಿಂಗ್ಸ್‌ಗಳು, ಅಮೆರಿಕಾದ ದ್ವಜ, ಖಾಲಿ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದು, ಇಡೀ ಪ್ರದೇಶ ಅಸ್ತವ್ಯಸ್ತವಾಗಿತ್ತು. ಗಲಾಟೆ ತಣ್ಣಗಾದ ಕೆಲ ತಾಸಿನ ಬಳಿಕ ಎಟಿಎಫ್ ಪೊಲೀಸರು ಆ ಸ್ಥಳಗಳನ್ನು ಸ್ವಚ್ಛ ಮಾಡುತ್ತಿದ್ದರು. ಈ ಮೊದಲು ಅಪ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸಿದ್ದ ನ್ಯೂಜೆರ್ಸಿ ಮೂಲದ ಕಾಂಗ್ರೆಸ್ ವ್ಯಕ್ತಿ ಆಂಡಿ ಕಿಮ್ ಅವರೊಟ್ಟಿಗೆ ಸೇರಿ ಸ್ವಚ್ಛತೆಗೆ ನೆರವಾಗಿದ್ದಾರೆ.
ಎಪಿ ಛಾಯಾಗ್ರಾಹಕ ಆಂಡ್ರು ಹರ್ನಿಕ್ ಅವರು ಫೋಟೋ ಕ್ಲಿಕ್ಕಿಸಿದ್ದಾರೆ. ಸ್ವತಃ ಹರ್ನಿಕ್ ಹಾಗೂ ವರದಿಗಾರರಾದ ಡೆನ್ ಫಿಲಿಪ್ಸ್ ಮತ್ತು ಟೊನ್ ಮಾಲಿನೊವಸ್ಕಿ ಅವರೂ ಕಿಮ್ ಅವರ ಫೋಟೊವನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಟ್ರಂಪ್ ಬೆಂಬಲಿಗರ ಗಲಾಟೆ ನಡೆದ ಸಂದರ್ಭದಲ್ಲಿ ಅವರು ತಮ್ಮ ಕಚೇರಿಯಲ್ಲಿ ಬಂಧಿಯಾಗಿದ್ದರು.
https://twitter.com/smurfman651/status/1347333278898929664?ref_src=twsrc%5Etfw%7Ctwcamp%5Etweetembed%7Ctwterm%5E1347333278898929664%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fcongressman-andy-kim-joins-clean-up-efforts-at-capitol-after-attack-photos-go-viral-7138042%2F