alex Certify ನೌಕರ ಶೌಚಾಲಯ ಹೋಗುವ ಪರಿಗೆ ಬೇಸತ್ತ ಕಂಪನಿ…! ಸಮಸ್ಯೆ ಪರಿಹರಿಸಲು ಜಾಲತಾಣದಲ್ಲಿ ಮೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕರ ಶೌಚಾಲಯ ಹೋಗುವ ಪರಿಗೆ ಬೇಸತ್ತ ಕಂಪನಿ…! ಸಮಸ್ಯೆ ಪರಿಹರಿಸಲು ಜಾಲತಾಣದಲ್ಲಿ ಮೊರೆ

ಆಫೀಸ್​ನಲ್ಲಿ ಕೆಲಸ ಮಾಡುವ ನೀವು ಹೆಚ್ಚಿನ ಸಮಯವನ್ನ ಟಾಯ್ಲೆಟ್​ನಲ್ಲೇ ಕಳೆಯುತ್ತೀರಾ..? ಅಥವಾ ನಿಮಗೆ ಆಫೀಸಿನ ರೆಸ್ಟ್​ ರೂಮಿನಲ್ಲೇ ಸಮಯ ಕಳೆಯೋಕೆ ಹೆಚ್ಚು ಇಷ್ಟವಾಗುತ್ತಾ..? ಇಂತಹ ವಿಚಿತ್ರ ಪ್ರಶ್ನೆಯನ್ನೇಕೆ ಕೇಳುತ್ತಿದ್ದಾರೆ ಎಂದುಕೊಂಡ್ರಾ..? ಇದಕ್ಕೆ ಕಾರಣಾನೂ ಇದೆ.

ಕಂಪನಿಯೊಂದು ತನ್ನ ಕಂಪನಿಯ ಉದ್ಯೋಗಿಯಿಂದಾಗಿ ಇಂತಹದ್ದೊಂದು ಸಮಸ್ಯೆಗೆ ಸಿಲುಕಿಹಾಕಿಕೊಂಡಿದ್ದು ಈ ವಿಚಾರವನ್ನ ರೆಡ್ಡಿಟ್​ ವೇದಿಕೆಯಲ್ಲಿ ಶೇರ್​ ಮಾಡಿದೆ.

ರೆಡಿಟ್​​ನಲ್ಲಿ ಕಂಪನಿಯು ಈ ರೀತಿ ಬರೆದಿದೆ : ನಮ್ಮ ಕಂಪನಿಯ ಉದ್ಯೋಗಿಯೊಬ್ಬ ತಾನು ಮಾಡುವ ಕೆಲಸದಲ್ಲಿ ನೈಪುಣ್ಯತೆಯನ್ನ ಹೊಂದಿದ್ದಾನೆ. ಅವರು ಕೆಲಸಕ್ಕೆ ಬಂದ ಕೂಡಲೇ ಶೌಚಾಲಯದ ಕಡೆಗೆ ಹೋಗುತ್ತಾರೆ. ಆದರೆ ಆತ ಒಮ್ಮೆ ಶೌಚಾಲಯಕ್ಕೆ ಹೋದ ಎಂದರೆ 20 ನಿಮಿಷ ಅಲ್ಲಿಯೇ ಕಳೆಯುತ್ತಾರೆ. ಅವರು ಪುನಃ ತಮ್ಮ ಜಾಗಕ್ಕೆ ಬಂದು ಕೆಲಸ ಮಾಡುವ ವೇಳೆಗೆ ಅರ್ಧ ಗಂಟೆ ವ್ಯರ್ಥವಾಗಿರುತ್ತದೆ.

ಇದಾದ ಬಳಿಕ 2-3 ಬಾರಿ ಕೆಲಸದ ಅವಧಿಯಲ್ಲಿಯೇ ಎಲ್ಲಿಗೋ ಹೋಗುತ್ತಾರೆ. ಪ್ರತಿ ಬಾರಿ ಹೋದಾಗಲೂ 20 ನಿಮಿಷ ತೆಗೆದುಕೊಳ್ತಾರೆ. ಕೊನೆಯ ಬಾರಿಗೆ ಅಂದರೆ ಕಚೇರಿಯಿಂದ ಹೊರಡಲು ಇನ್ನೇನು ಅರ್ಧ ಗಂಟೆ ಇದೆ ಎನ್ನುವಾಗ ಮತ್ತೊಮ್ಮೆ ಶೌಚಾಲಯಕ್ಕೆ ಹೋಗಿ ಬರ್ತಾರೆ. ಅಂದರೆ ಅವರು ಹೆಚ್ಚಿನ ಸಮಯವನ್ನ ಶೌಚಾಲಯದಲ್ಲೇ ಕಳೆಯುತ್ತಾರೆ.

ಇವೆಲ್ಲವನ್ನ ಒಟ್ಟುಗೂಡಿಸಿದ್ರೆ ಅವರು ವಾರದಲ್ಲಿ ನಾಲ್ಕು ದಿನ ಕೆಲಸ ಹಾಗೂ ಒಂದು ದಿನ ಶೌಚಾಲಯದಲ್ಲೇ ಕಳೆದಂತೆ ಆಗುತ್ತಿದೆ. ಅಂದರೆ ಈ ವ್ಯಕ್ತಿ ಶೌಚಾಲಯದಲ್ಲಿ ಕೂತು ಮೊಬೈಲ್​ ನೋಡಿದ್ದಕ್ಕೂ ನಾವು ಸಂಬಳ ಕೊಡುವಂತಾಗಿದೆ ಎಂದು ಹೇಳಿದೆ.

ಆದರೆ ಈ ವ್ಯಕ್ತಿ ಒಳ್ಳೆಯ ಕೆಲಸಗಾರನಾಗಿರುವ ಹಿನ್ನೆಲೆ ನಮಗೆ ಅವರನ್ನ ಕೆಲಸದಿಂದ ಕಿತ್ತು ಹಾಕಲು ಇಷ್ಟವಿಲ್ಲ ಎಂದು ಕಂಪನಿ ರೆಡಿಟ್​ನಲ್ಲಿ ಹೇಳಿಕೊಂಡಿದೆ. ಅಲ್ಲದೇ ಆಸ್ಟ್ರೇಲಿಯಾದ ಕಾರ್ಮಿಕ ನೀತಿಯ ಪ್ರಕಾರ ಈ ಕಾರಣವನ್ನ ನೀಡಿ ಆತನನ್ನ ಕೆಲಸದಿಂದ ತೆಗೆದು ಹಾಕೋದೂ ಸಾಧ್ಯವಾಗದ ಕೆಲಸವಾಗಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯ ಈ ಸಮಸ್ಯೆಗೆ ರೆಡಿಟ್​ ಬಳಕೆದಾರರು ಸಾಕಷ್ಟು ಸಲಹೆಗಳನ್ನ ನೀಡಿದ್ದಾರೆ. ಕೆಲವರು ಅವರ ಆರೋಗ್ಯ ಸರಿ ಇಲ್ಲದೇ ಇದ್ದಿರಬಹುದು ಎಂದಿದ್ದರೆ ಇನ್ನು ಕೆಲವರು ಆತ ಧೂಮಪಾನಿಯಾಗಿದ್ದಿರಬಹುದು ಎಂದು ಹೇಳಿದ್ದಾರೆ.

ಆತನ ಕೆಲಸದ ಗುಣಮಟ್ಟವನ್ನ ಗಮನಿಸಿ. ಅದನ್ನ ಹೊರತುಪಡಿಸಿ ಆತ ಎಷ್ಟು ಗಂಟೆ ಕೆಲಸ ಮಾಡುತ್ತಾನೆ ಅನ್ನೋದಲ್ಲ. ಒಬ್ಬೊಬ್ಬರು ಕೆಲಸ ಮಾಡುವ ವಿಧಾನ ಒಂದೊಂದು ರೀತಿಯಲ್ಲಿ ಇರುತ್ತೆ. ಹಾಗಾಗಿ ಕೆಲಸ ಆತ ಕೊಟ್ಟ ಅವಧಿಗೆ ಮುಗಿಸಿದ್ದಾನಾ ಅನ್ನೋದಷ್ಟೇ ಮುಖ್ಯ ಹೊರತಾಗಿ ಆತ ಶೌಚಾಲಯಕ್ಕೆ ಹೋದ ಸಮಯವಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...