ಟಿವಿ ಚಾನೆಲ್ ಒಂದರ ಲೈವ್ ಶೋ ವೇಳೆ ಕಾಮೆಂಟೇಟರ್ ಒಬ್ಬರು ವೈನ್ ಕುಡಿಯುತ್ತಿರುವ ದೃಶ್ಯಾವಳಿಯೊಂದು ವೈರಲ್ ಆಗಿದೆ. ಬರಹಗಾರ್ತಿ ರೆಬೆಕ್ಕಾ ಟ್ರಾಯಿಸ್ಟರ್ರನ್ನು MSNBC ಹೋಸ್ಟ್ ಕ್ರಿಸ್ ಹೇಯ್ಸ್ ಸಂದರ್ಶನ ಮಾಡುತ್ತಿದ್ದರು.
ಸಹ ನ್ಯಾಯಾಧೀಶ ರೂತ್ ಬಾಡೆರ್ ನಿಧನದ ಬಳಿಕ ಅಮೆರಿಕ ಸುಪ್ರೀಂ ಕೋರ್ಟ್ನಲ್ಲಿ ಆಗುತ್ತಿರುವ ಘಟನಾವಳಿಗಳ ಕುರಿತಂತೆ ಟ್ರಾಯಿಸ್ಟರ್ ಚರ್ಚೆಯ ವೇಳೆ ಮಾತನಾಡುತ್ತಿದ್ದು, ಈ ವೇಳೆ ತಮ್ಮ ಮುಂದೆ ಇದ್ದ ಗ್ಲಾಸ್ ಅನ್ನು ಮೇಲೆತ್ತಿ ಕೆಂಪು ವೈನ್ ನ ಒಂದು ಸಿಪ್ ಅನ್ನು ಹೀರಿದ್ದಾರೆ ಟ್ರಾಯಿಸ್ಟರ್.
“ಹೌದು ಅದು ವೈನ್. ನನ್ನ ಕುಟುಂಬದೊಂದಿಗೆ ಡಿನ್ನರ್ ಮಾಡುತ್ತಿದ್ದ ವೇಳೆ ಸುದ್ದಿ ತಿಳಿದು, ಕ್ರಿಸ್ರ ಶೋನಲ್ಲಿ ಮಾತನಾಡಲು ಕೂಡಲೇ ಸಿದ್ಧರಾಗಿ ಎಂದು ಕರೆ ಬಂತು. ಈ ಬಗ್ಗೆ ಹೆಚ್ಚು ಚಿಂತಿಸದೇ ನನ್ನೊಂದಿಗೆ ಪೇಯವನ್ನು ತೆಗೆದುಕೊಂಡು ಬಂದೆ” ಎಂದು ಟ್ರಾಯಿಸ್ಟರ್ ತಮ್ಮ ಈ ನಡೆಯ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.