alex Certify ಐಸ್ ಕ್ರೀಮ್ ಹೆಸರಿನಲ್ಲಿ ಸಾಬೂನು ತಿನ್ನಿಸಿದ ಯೂಟ್ಯೂಬರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್ ಕ್ರೀಮ್ ಹೆಸರಿನಲ್ಲಿ ಸಾಬೂನು ತಿನ್ನಿಸಿದ ಯೂಟ್ಯೂಬರ್…!

ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಬೇಕು ಅಂತಾ ಅನೇಕರು ಜೀವ ಪಣಕ್ಕಿಡೋಕೆ ಬೇಕಿದ್ದರೂ ತಯಾರಾಗಿ ಬಿಡ್ತಾರೆ. ಇಲ್ಲವೇ ಇನ್ನೊಬ್ಬರ ಜೀವಕ್ಕಾದರೂ ತೊಂದರೆ ಕೊಟ್ಟು ಬಿಡ್ತಾರೆ.

ಈ ಮಾತಿಗೆ ಪುರಾವೆ ಎಂಬಂತೆ ಕೊಲಂಬಿಯಾದ ಯು ಟ್ಯೂಬರ್​ ಒಬ್ಬ ನಿರಾಶ್ರಿತರಿಗೆ ಐಸ್​ಕ್ರೀಂ ಎಂದು ಸುಳ್ಳು ಹೇಳಿ ಸೋಪನ್ನ ತಿನ್ನಿಸಿ ಅದನ್ನ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.

ಮಿಲ್ಟೋನ್​ ಡೊಮಿಂಗ್ವಿಜ್​​ ಎಂಬಾತ ಐದು ಸಾಬೂನುಗಳನ್ನ ಚಾಕೋಲೇಟ್​ ದ್ರವದಲ್ಲಿ ಅದ್ದಿದ್ದಾನೆ. ಬಳಿಕ ಬಡ ಜನರ ಬಳಿ ಹೋಗಿ ತಾನು ಹೊಸ ಉದ್ಯಮ ಶುರು ಮಾಡಿದ್ದೇನೆ ಎಂದು ಹೇಳಿ ಚಾಕೋಲೇಟ್​​ನಲ್ಲಿ ಅದ್ದಿದ ಸಾಬೂನುಗಳನ್ನ ಐಸ್​ಕ್ರೀಂ ಎಂದು ಸುಳ್ಳು ಹೇಳಿ ನೀಡಿದ್ದಾನೆ.

ಹಾಗೂ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ನೆಟ್ಟಿಗರು ಯು ಟ್ಯೂಬರ್​ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇನ್ನು ಈ ವಿಚಾರ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು ಯುಟ್ಯೂಬರ್​ ಹಾಗೂ ಈ ಕೃತ್ಯದಲ್ಲಿ ಆತನಿಗೆ ಸಾಥ್​ ನೀಡಿದ ಇನ್ನೂ ಇಬ್ಬರು ಗಂಭೀರ ಪರಿಣಾಮ ಎದುರಿಸಲಿದ್ದಾರೆ ಎಂದು ಹೇಳಿದ್ರು. ಇನ್ನು ಈ ಕೃತ್ಯದಲ್ಲಿ ಭಾಗಿಯಾದವರಲ್ಲಿ ಒಬ್ಬನನ್ನ ಡಿಲಾನ್​ ಎಂದು ಗುರುತಿಸಲಾಗಿದ್ದು ಈ ಕೃತ್ಯ ಎಸಗಿದದ್ದಕ್ಕೆ 324 ಡಾಲರ್​ ದಂಡ ವಿಧಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...