alex Certify ಗೂಬೆ ಶಿರಚ್ಚೇದ ಮಾಡಿದ್ದ ಯುವತಿಗೆ ಗುಂಡಿಕ್ಕಿ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಬೆ ಶಿರಚ್ಚೇದ ಮಾಡಿದ್ದ ಯುವತಿಗೆ ಗುಂಡಿಕ್ಕಿ ಹತ್ಯೆ

ಶಿರಚ್ಚೇದವಾಗಿದ್ದ ಗೂಬೆಯನ್ನ ಹಿಡಿದುಕೊಂಡ ಫೋಟೋ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ಯುವತಿಯನ್ನ ಕೊಲಂಬಿಯಾದ ಕೊರೋಜಲ್​​ನಲ್ಲಿ ಅಪರಿಚಿತ ಹಲ್ಲೆಕೋರರು ಗುಂಡಿಕ್ಕಿ ಕೊಂದಿದ್ದಾರೆ.

ಈಕೆ ಗೂಬೆಯ ಕಾರಣಕ್ಕೇ ಕೊಲೆಯಾದಳೋ ಇಲ್ಲವೇ ಬೇರೆ ಯಾವುದಾದರೂ ಅನ್ಯ ಕಾರಣ ಇದರ ಹಿಂದೆ ಇತ್ತಾ ಅನ್ನೋ ವಿಚಾರವಾಗಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಡೈಲಿ ಮೇಲ್​ ವರದಿ ಪ್ರಕಾರ ಆಕೆಯ ಮನೆಯ ಹೊರಗೆ ಬೈಕ್​ನಲ್ಲಿ ಬಂದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ.

21 ವರ್ಷದ ಮಿಲಿಡಿಸ್​ ಅಲ್ಡಾನಾ 6 ತಿಂಗಳ ಹಿಂದೆ ತಲೆ ಕತ್ತರಿಸಿದ್ದ ಗೂಬೆಯನ್ನ ಹಿಡಿದ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಳು. ಈಕೆಯ ಈ ಕೃತ್ಯಕ್ಕೆ ಕೊಲಂಬಿಯಾದಲ್ಲಿ ಸಾಮೂಹಿಕ ಆಕ್ರೋಶ ವ್ಯಕ್ತವಾಗಿತ್ತು. ಅನೇಕರು ಮಿಲಿಡಿಸ್​ಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದರು.

ಬೈಕ್​ನಲ್ಲಿ ಬಂದ ಬಂದೂಕುಧಾರಿ ಈಕೆಯ ಮೇಲೆ 6 ಗುಂಡುಗಳನ್ನ ಹಾರಿಸಿ ಬೈಕ್​ ಸವಾರನ ಜೊತೆ ಪರಾರಿಯಾಗಿದ್ದಾನೆ. ಮಿಲಿಡಿಸ್​ಳನ್ನ ಕೂಡಲೇ ಆಸ್ಪತ್ರೆ ಸಾಗಿಸುವ ಪ್ರಯತ್ನ ಮಾಡಲಾಗಿತ್ತಾದರೂ ಮಾರ್ಗ ಮಧ್ಯೆಯೇ ಆಕೆ ಸಾವನ್ನಪ್ಪಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...