ಕೆಲಸ ಬಿಟ್ಟ ಉದ್ಯೋಗಿಯೊಬ್ಬನಿಗೆ ಉದ್ಯೋಗದಾತನು ಕೊನೆಯ ಸೆಟಲ್ ಮೆಂಟ್ ರೂಪದಲ್ಲಿ ಗ್ರೀಸ್ ಹಾಗೂ ಆಯಿಲ್ ಲೇಪಿತ ತೊಂಬತ್ತು ಸಾವಿರ ನಾಣ್ಯ ನೀಡಿದ ವಿಚಿತ್ರ ಪ್ರಕರಣವೊಂದು ಅಟ್ಲಾಂಟಾದಲ್ಲಿ ನಡೆದಿದೆ.
ಇದೇ ವೇಳೆ ಜಿಡ್ಡಿನ ನಾಣ್ಯವನ್ನು ಏನು ಮಾಡುವುದೆಂದು ತಲೆಮೇಲೆ ಕೈಹೊತ್ತು ಕುಳಿತ ಆ ವ್ಯಕ್ತಿಗೆ ನಾಣ್ಯ ಸಂಬಂಧಿ ಸಂಸ್ಥೆಯೊಂದು ನೆರವಿಗೆ ಬಂದು ಗಮನ ಸೆಳೆದಿದೆ.
ಉದ್ಯೋಗಪತಿಯಿಂದ ಬಳಕೆಗೆ ಬಾರದ ಸ್ಥಿತಿಯಲ್ಲಿದ್ದ ಹಣ ಪಡೆದವರನ್ನು ಫ್ಲೇಟನ್ ಎಂದು ಗುರುತಿಸಲಾಗಿದೆ.
ವಾಷಿಂಗ್ಟನ್ ಮೂಲದ ‘ಕಾಯಿನ್ ಸ್ಟಾರ್’ ಎಂಬ ನಾಣ್ಯ ಸಂಸ್ಥೆಯು ಈ ಸಮಸ್ಯೆಯ ಬಗ್ಗೆ ಕೇಳಿ ಅವರಿಗೆ ಸಹಾಯ ಮಾಡಲು ನಿರ್ಧರಿಸಿತು. ಗುರುವಾರ, ಅವರು ನಾಣ್ಯಗಳನ್ನು ತೆಗೆದುಕೊಂಡು, ಅವರಿಗೆ 1000 ಡಾಲರ್ ಚೆಕ್ ನೀಡಿದೆ.
ಕೇವಲ 9 ರೂ.ಗೆ ಇಲ್ಲಿ ಸಿಗ್ತಿದೆ 809 ರೂ. ಸಿಲಿಂಡರ್
ನಾವು ವಾರ್ಷಿಕವಾಗಿ ಸುಮಾರು 41 ಬಿಲಿಯನ್ ನಾಣ್ಯಗಳನ್ನು ಸಂಸ್ಕರಿಸುತ್ತೇವೆ, ಈ 91,000 ನಾಣ್ಯಗಳನ್ನು ಸ್ವೀಕರಿಸುವುದು ಒಂದು ದಿನದ ಕೆಲಸ ಎಂದು ಕಂಪನಿಯ ತಿಳಿಸಿದೆ.
ಈ ಮುನ್ನ ಓಕೆ ವಾಕರ್ ಆಟೊ ವರ್ಕ್ಸ್ ನಲ್ಲಿ ಉದ್ಯೋಗಿಯಾಗಿದ್ದ ಫ್ಲೇಟನ್ ನವೆಂಬರ್ ನಲ್ಲಿ ಕೆಲಸವನ್ನು ತೊರೆದರು ಮತ್ತು ಅವರ ಪಾಲಿನ ಹಣ ಸುಮಾರು 915 ಡಾಲರ್ ಉದ್ಯೋಗದಾತನ ಬಳಿ ಬಾಕಿ ಉಳಿದಿತ್ತು.
ಒಂದು ದಿನ ಆತ ಎಣ್ಣೆಯುಕ್ತ ಮತ್ತು ಜಿಡ್ಡಿನಂತಿದ್ದ ಸುಮಾರು 90,000 ನಾಣ್ಯಗಳನ್ನು ಅವನ ಮನೆ ಬಾಗಿಲಿಗೆ ತಂದು ಹಾಕಿದಾಗ ಫ್ಲೇಟನ್ ಆಘಾತಕ್ಕೊಳಗಾಗಿದ್ದರು. ಸ್ಥಳೀಯ ಮಾಧ್ಯಮದ ವರದಿಯ ಪ್ರಕಾರ ಆತ ಮತ್ತು ವಿನೆಗರ್ ನಿಂದ ನಾಣ್ಯವನ್ನು ಸ್ವಚ್ಛಗೊಳಿಸಲು ಹಲವು ದಿನಗಳು ಕಳೆದವಂತೆ.