
ಸಾಮಾನ್ಯವಾಗಿ ಮೊಲಗಳು ಅದೆಷ್ಟು ದೊಡ್ಡದಾಗಿ ಬೆಳೆಯಬಹುದು…? ಪೂರ್ಣ ಬೆಳೆದ ಮೊಲಗಳು 40 ಸೆಂ.ಮೀ. ಉದ್ದ ಹಾಗೂ 1.2-2 ಕೆಜಿಗಳಷ್ಟು ತೂಗುತ್ತವೆ.
ಫ್ಲೆಮಿಶ್ ಜೈಮಟ್ ಹೆಸರಿನ ತಳಿಯ ಮೊಲಗಳು ಅತ್ಯಂತ ದೊಡ್ಡ ಮೊಲಗಳು ಎಂದು ಹೆಸರಾಗಿವೆ. ಇವುಗಳನ್ನು ಸಾಕುವುದು ಸಾಕಷ್ಟು ಕೌಶಲ್ಯ ಬೇಡುತ್ತದೆ, ಮಾಲೀಕರಿಗೆ ಬಹಳಷ್ಟು ತಾಳ್ಮೆ ಬೇಕಾಗುತ್ತದೆ.
ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ಕೋಕೊವಾ ಪಫ್ ಹೆಸರಿನ ಈ ದೈತ್ಯ ಮೊಲವೊಂದು ತನ್ನ ಬೃಹತ್ ಗಾತ್ರದಿಂದ ಜಗತ್ತಿನಾದ್ಯಂತ ನೆಟ್ಟಿಗರನ್ನು ಬೆರಗಾಗುವಂತೆ ಮಾಡಿದೆ. ಈ ಗಂಡು ಮೊಲ ಅದೆಷ್ಟು ದೊಡ್ಡದಿದೆ ಹಾಗೂ ಅದರ ಮಾಲೀಕರ ಜೊತೆಗಿನ ಅದರ ಒಡನಾಟ ಹೇಗಿದೆ ಎಂದು ಖುದ್ದು ನೀವೇ ಈ ವಿಡಿಯೋದಲ್ಲಿ ನೋಡಿ ಆನಂದಿಸಿ.
https://www.instagram.com/p/B-K-r0pFKvx/?utm_source=ig_embed