
ಸಮುದ್ರದಲ್ಲಿ ವಿಹಾರ ಮಾಡುತ್ತಿದ್ದ ಕುಟುಂಬವೊಂದರ ಟ್ರಿಪ್ ದುರಂತದಲ್ಲಿ ಅಂತ್ಯವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದೆ.
ಗಿಲ್ಲಿಯಾನ್ ಘೆರ್ಬವಾಜ್ ಅವರು ತಮ್ಮ ಕುಟುಂಬದೊಂದಿಗೆ ಏಪ್ರಿಲ್ 3ರಂದು ದಕ್ಷಿಣ ಆಫ್ರಿಕಾ ಕಡಲತೀರದಲ್ಲಿ ಹಾಲಿಡೇ ಮಾಡುತ್ತಿದ್ದರು. ಇಲ್ಲಿನ ಅಲ್ಗೋ ಬೇ ಬಳಿ ತಿಮಿಂಗಿಲಗಳನ್ನು ವೀಕ್ಷಿಸಲು ಹೊರಟಿದ್ದ ಕುಟುಂಬವಿದ್ದ ದೋಣಿ ಭಾರೀ ತಿಮಿಂಗಿಲವೊಂದಕ್ಕೆ ಢಿಕ್ಕಿ ಹೊಡೆದಿದೆ.
4 ಕೋಟಿ ರೂ. ತೆತ್ತರೂ ಸಿಕ್ಕಿದ್ದು ಮಾತ್ರ ಅರ್ಧ ಮನೆ….!
ಸುಮಾರು 40 ಟನ್‌ಗಳಷ್ಟಿದೆ ಎನ್ನಲಾದ ಈ ಬ್ರೈಡ್ಸ್ ತಿಮಿಂಗಿಲ ದೋಣಿಯನ್ನು ಅಲುಗಾಡಿಸಿಬಿಟ್ಟಿದೆ. ಇದರ ಪರಿಣಾಮ ಕುಟುಂಬದ ತಂದೆ ನೀರಿಗೆ ಬಿದ್ದುಬಿಟ್ಟಿದ್ದಾರೆ. ಆ ವೇಳೆ ಅವರ ಮೈಯಲ್ಲಿ ಯಾವುದೇ ರಕ್ಷಣಾ ವಸ್ತ್ರಗಳು ಇರಲಿಲ್ಲ. ಅದೃಷ್ಟವಶಾತ್ ಸ್ಥಳದಲ್ಲೇ ಇದ್ದ ಮತ್ತೊಂದು ದೋಣಿ ಅವರನ್ನು ಗಮನಿಸಿ ತಕ್ಷಣ ಅವರನ್ನು ಅಲ್ಲಿಂದ ಪಿಕ್-ಅಪ್ ಮಾಡಿದೆ. ಈ ಘಟನೆಯು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ.
https://www.youtube.com/watch?v=JoOoopg6KsE&t=8s