ಇಟಲಿಯಲ್ಲೂ ಕೂಡ ಕೊರೊನಾ ವೈರಸ್ ತಾಂಡವವಾಡ್ತಾ ಇದ್ದು ಶಾಲೆಗಳನ್ನ ಬಂದ್ ಮಾಡಲಾಗಿದೆ. ಹೀಗಾಗಿ ದಕ್ಷಿಣ ಇಟಲಿಯ ಕ್ಯಾಂಪೆನಿಯಾ ಭಾಗದಲ್ಲಿ ಮಕ್ಕಳಿಗೆ ಬೀದಿಗಳಲ್ಲಿ ಶಿಕ್ಷಕರು ಪಾಠ ಮಾಡ್ತಿದ್ದಾರೆ.
ಕ್ಯಾಂಪಾನಿಯಾ ಭಾಗದಲ್ಲಿ ಕೊರೊನಾ ಸಂಖ್ಯೆಯಲ್ಲಿ ನಿಯಂತ್ರಣ ಸಾಧಿಸಲಾಗಿತ್ತು. ಆದರೆ ಕಳೆದ ಕೆಲ ವಾರಗಳಿಂದ ಸೋಂಕಿನ ಪ್ರಮಾಣ ಏರಿಕೆಯಾಗ್ತಾ ಇರೋದ್ರಿಂದ ಅಕ್ಟೋಬರ್ ಅಂತ್ಯದವರೆಗೆ ಶಾಲೆಗಳನ್ನ ಮುಚ್ಚಲಾಗಿದೆ.
ಆದರೆ ಪುಟಾಣಿ ಮಕ್ಕಳಿಗೆ ಕೊರೊನಾದ ಬಗ್ಗೆ ಏನೂ ಗೊತ್ತಿಲ್ಲ. ಶಾಲೆಗೆ ಹೋಗಬೇಕು ಅಂತಾ ಆಸೆ ಇಟ್ಟುಕೊಂಡಿದ್ದ ಮಕ್ಕಳಿಗಾಗಿ ಶಿಕ್ಷಕರು ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗ್ತಿದ್ದ ಮೆಟ್ಟಿಲುಗಳ ಮೇಲೆ ಕೂರಿಸಿ ಪಾಠ ಮಾಡ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಶಿಕ್ಷಕ ಟೊನಿನೊ ಸ್ಟೊರ್ನಿಯೊಲೊ ನಾವು ಸರ್ಕಾರಿ ಆದೇಶವನ್ನೂ ಪಾಲಿಸಿಕೊಂಡೇ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಮಕ್ಕಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪಾಠ ಮಾಡಲಾಗ್ತಿದೆ ಅಮತಾ ಹೇಳಿದ್ರು. ಇಟಲಿಯ ಲೊಂಬಾರ್ಡಿಯಲ್ಲಿ ರಾತ್ರಿ 11ರಿಂದ ಮುಂಜಾನೆ 5ಗಂಟೆವರೆಗೆ ಕರ್ಪ್ಯೂ ಜಾರಿಯಲ್ಲಿದೆ.