ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ವಿಷಯವಾಗಿ ಹಲವು ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಇಲ್ಲೊಂದು ಚರ್ಚ್ ಸಾಮಾಜಿಕ ಅಂತರಕ್ಕೆ ಸಂಬಂಧಿಸಿದಂತೆ ಹಾಕಿರುವ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.
ಹೌದು, ಅಮೆರಿಕದ ಲೂಸಿಯಾನದ ರಿಡೀಮೀರ್ ಪ್ರೆಸ್ಬೈಟಿರಿಯನ್ ಎನ್ನುವ ಚರ್ಚ್ ಇದೀಗ ಸಾಮಾಜಿಕ ಅಂತರದೊಂದಿಗೆ ಪ್ರಾರ್ಥನೆಗೆ ಅವಕಾಶ ನೀಡಿದೆ. ಆದರೆ ಈ ವೇಳೆ ಜನರು ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಬೈಬಲ್‌ನ ಕೆಲವು ಪಾತ್ರಗಳ ಕೆಲವು ಕೋಟ್‌ಗಳನ್ನು ಪ್ರಿಂಟ್ ಮಾಡಿ ಅಂಟಿಸಲಾಗಿದೆ. ಇದರಲ್ಲಿ ಈ ಸೀಟು ಮೀಸಲು ಎನ್ನುವ ರೀತಿಯಲ್ಲಿಯೇ ಅನೇಕ ಪೋಸ್ಟ್ ಗಳನ್ನು ಅಂಟಿಸಿದ್ದಾರೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದೆ.
ಈ ವಿಭಿನ್ನ ರೀತಿಯ ಪ್ರಯತ್ನವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಭಾರಿ ವೈರಲ್ ಆಗಿದೆ. ಜನರಲ್ಲಿ ಸಾಮಾಜಿಕ ಅಂತರದ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿರುವ ಚರ್ಚ್ ಆಡಳಿತ ಮಂಡಳಿಯ ಕಾರ್ಯಕ್ಕೆ ಶಹಬಾಸ್‌ಗಿರಿ ವ್ಯಕ್ತವಾಗಿದೆ.
https://www.facebook.com/fathernathan/photos/a.502672193148724/3310249712390944/?type=3
https://www.facebook.com/fathernathan/photos/a.502672193148724/3310249705724278/?type=3
https://www.facebook.com/fathernathan/photos/a.502672193148724/3310249739057608/?type=3