ಜೀವಕ್ಕೇ ಮಾರಕವಾಗಬಲ್ಲ ಅಪಘಾತವೊಂದರಿಂದ ಪಾರಾಗಿರುವ ಅಮೆರಿಕದ ಟೀನೇಜರ್ ಒಬ್ಬ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ತನಗಾದ ಅಫಘಾತದಿಂದ ಪಾರಾಗಲು ಈತನಿಗೆ ತನ್ನ ದೇಹದ ಅರ್ಧ ಭಾಗವನ್ನೇ ಕತ್ತರಿಸಿ ತೆಗೆಯಬೇಕಾಗಿ ಬಂದಿತ್ತು.
ಲೊರೆನ್ ಶಾಯೆರ್ಸ್ ಹೆಸರಿನ 19 ವರ್ಷದ ಈ ಟೀನೇಜರ್ ನಾಲ್ಕು ಟನ್ ಸಾಮರ್ಥ್ಯದ ಫೋರ್ಕ್‌ಲಿಫ್ಟ್ ಟ್ರಕ್ ಒಂದನ್ನು ಚಾಲನೆ ಮಾಡುತ್ತಿದ್ದ ವೇಳೆ ಅಪಘಾತಕ್ಕೆ ಒಳಗಾಗಿ ವಾಹನದ ಅಡಿಗೆ ಸಿಲುಕಿಬಿಟ್ಟಿದ್ದ. ಇಲ್ಲಿನ ಮಾಂಟನಾದದ ಗ್ರೇಟ್ ಫಾಲ್ಸ್‌ನವನಾದ ಈ ಟೀನೇಜರ್ ತನಗೆ ಅಪಘಾತವಾದ ಬಳಿಕವೂ ಪ್ರಜ್ಞಾವಸ್ಥೆಯಲ್ಲೇ ಇದ್ದು, ತನ್ನ ಕೈಗಳು ಹಾಗೂ ಸೊಂಟ ಅಪ್ಪಚ್ಚಿಯಾಗಿರುವುದನ್ನು ಕಣ್ಣಾರೆ ಕಂಡಿದ್ದಾನೆ.
ತನ್ನ ಈ ಅನುಭವದ ಬಗ್ಗೆ ಹೇಳಿಕೊಂಡಿರುವ ಲೊರೆನ್, ತನ್ನ ಅರ್ಧ ದೇಹವನ್ನು ಕೊಯ್ದುಕೊಳ್ಳದೇ ಬೇರೆ ವಿಧಿಯೇ ಇರಲಿಲ್ಲ ಎಂದಿದ್ದಾನೆ.
https://twitter.com/NowMyNews/status/1330992667908423680?ref_src=twsrc%5Etfw%7Ctwcamp%5Etweetembed%7Ctwterm%5E1330992667908423680%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fchoice-of-life-and-death-us-teen-gets-entire-lower-body-amputated-after-forklift-truck-crash-3112382.html